

ವಾರಾಣಸಿ: ನಿಯತ ಪಠ್ಯಕ್ರಮದಲ್ಲಿ ‘ಹಿಂದು ಧರ್ಮ’ವನ್ನು ಪರಿಚಯಿಸಿದ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಬನಾರಸ್ ಹಿಂದು ಯೂನಿವರ್ಸಿಟಿ ಭಾಜನವಾಗಿದೆ.
ಹಿಂದು ಸ್ಟಡೀಸ್ ಎಂಬ ವಿಷಯದ ಬಗ್ಗೆ ಸ್ನಾತಕೋತ್ತರ ಕೋರ್ಸ್ ಆರಂಭ ಮಾಡಿರುವುದಾಗಿ ವಿವಿಘೋಷಿಸಿದೆ. ಕೊಲಂಬಿಯ ವಿವಿ ಈ ಕೋರ್ಸ್ಗೆ ಶಿಫಾರಸು ನೀಡಿದ್ದು, ಭಾರತ ಅಧ್ಯಯನ ಕೇಂದ್ರದ ಮೂಲಕ ಇದನ್ನು ಫ್ಯಾಕಲ್ಟಿ ಆಫ್ ಆರ್ಟ್ಸ್ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದೆ.
ವಿವಿಯ ಶತಮಾನೋತ್ಸವ ಸಂದರ್ಭದಲ್ಲಿ ಈ ಅಧ್ಯಯನ ಕೇಂದ್ರ ಸ್ಥಾಪಿಸಲಾಗಿದ್ದು, ತತ್ತ್ವಶಾಸ್ತ್ರ ಮತ್ತು ಧರ್ಮ, ಸಂಸ್ಕೃತ ಮತ್ತು ಪುರಾತನ ಭಾರತ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ತ್ವ ಇಲಾಖೆಗಳ ಸಹಯೋಗದಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ. ಹಿಂದು ಸ್ಟಡೀಸ್ ಕೋರ್ಸ್ಗೆ ಒಬ್ಬ ವಿದೇಶಿ ಸೇರಿ 45 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.