ಇದೆಂಥಾ ಸಾವು... ಕರಾಟೆ ಆಡುವಾಗಲೇ ಪ್ರಾಣಬಿಟ್ಟ 22 ವರ್ಷದ ಯುವಕ; ಸಾವಿನ ಸುತ್ತ ಅನುಮಾನದ ಹುತ್ತ!

karate pic
Published on

ಬೆಂಗಳೂರು: ಕರಾಟೆ ಆಡುವ ವೇಳೆಯೇ ಎದೆನೋವು ಕಾಣಿಸಿಕೊಂಡ ಪರಿಣಾಮ ಕರಾಟೆ ಪಟು ಸಾವನ್ನಪ್ಪಿರುವ ಘಟನೆ ದಾಸರಹಳ್ಳಿ ಹೆಸರಘಟ್ಟ ರಸ್ತೆಯ ಎಂಇಐ ಕರಾಟೆ ಶಾಲೆಯಲ್ಲಿ ನಡೆದಿದೆ.

ಕೆರೆಗುಡ್ಟದಹಳ್ಳಿಯ ಪ್ರವೀಣ್ (22) ಮೃತ ಯುವಕ. ಕರಾಟೆ ಆಡುವ ವೇಳೆಯೇ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎನ್.ಆರ್.ಆರ್ ಆಸ್ಪತ್ರೆಗೆ ರವಾನೆ ಮಾಡುವ ಮಾರ್ಗಮಧ್ಯೆ ಕರಾಟೆ ಪಟು ಮೃತಪಟ್ಟಿದ್ದಾರೆ.

ಮಗನ ಸಾವಿನ ಬಗ್ಗೆ ಪ್ರಥಮ ಚಿಕಿತ್ಸೆ ಕೊಟ್ಟ ಶ್ರೀನಿವಾಸ ಆಸ್ಪತ್ರೆ ವೈದ್ಯ ಹಾಗೂ ಕರಾಟೆ ಶಿಕ್ಷಕ ಲೋಕೇಶ್ ಮೇಲೆ ಮೃತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net