ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನಿಗೆ ಗುಂಡಿಕ್ಕಿ ಕೊಲೆ!

ajay lalwani
Published on

ಪಾಕಿಸ್ತಾನ: ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿ 31 ವರ್ಷದ ಹಿಂದೂ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಅಜಯ್​ ಲಾಲ್ವಾನಿ ಮೃತ. ಇವರು ಸಿಂಧ್​ ಪ್ರಾಂತ್ಯದಲ್ಲಿ ಸ್ಥಳೀಯ ಟಿವಿ ಮತ್ತು ದಿನಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ತಲೆ ಕೂದಲು ಕಟ್​ ಮಾಡಿಸಿಕೊಳ್ಳಲೆಂದು ಸುಕ್ಕೂರ್​​ ನಗರದ ಕ್ಷೌರ ಅಂಗಡಿಯೊಂದರಲ್ಲಿ ಕುಳಿತ್ತಿದ್ದ ಅಜಯ್​ ಮೇಲೆ ಎರಡು ಬೈಕ್​ ಮತ್ತು ಒಂದು ಕಾರಿನಲ್ಲಿ ಬಂದು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅಜಯ್​ ಹೊಟ್ಟೆ, ತೋಳು ಮತ್ತು ಮೊಣಕಾಲಿಗೆ ಗುಂಡು ಹೊಕ್ಕಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಬದುಕುಳಿಯಲಿಲ್ಲ. ಇದನ್ನೂ ಓದಿರಿ ಪೊಲೀಸ್​ ಠಾಣೆ ಎದುರಲ್ಲೇ ಕಾಂಗ್ರೆಸ್ ಮುಖಂಡನ​ ಬರ್ಬರ ಹತ್ಯೆ! ಬೆಚ್ಚಿಬಿದ್ದ ಜನ

ವೈಯಕ್ತಿಕ ದ್ವೇಷಕ್ಕೆ ಪತ್ರಕರ್ತನ ಕೊಲೆ ಆಗಿದೆ ಎಂಬ ಪೊಲೀಸರ ಹೇಳಿಕೆಯನ್ನು ನಿರಾಕರಿಸಿರುವ ಮೃತನ ತಂದೆ ದಿಲೀಪ್​ ಕುಮಾರ್​, ನಮ್ಮ ಕುಟುಂಬಕ್ಕೆ ಯಾರ ಮೇಲೂ ದ್ವೇಷ ಇಲ್ಲ. ನನ್ನ ಮಗನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದು, ಶುಕ್ರವಾರ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಜಯ್​ ಲಾಲ್ವಾನಿ ಹತ್ಯೆ ಖಂಡಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮೃತನ ಅಂತ್ಯಕ್ರಿಯೆ ಮುಗಿದ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net