ಹಿಂಡೆನ್‌ಬರ್ಗ್ ಆರೋಪಗಳು ಆಧಾರರಹಿತ! SEBI ಕ್ಲೀನ್ ಚಿಟ್ ಬೆನ್ನಲ್ಲೇ ಗೌತಮ್ ಅದಾನಿ ಪ್ರತಿಕ್ರಿಯೆ | Hindenburg Claims

ವಿಜಯವಾಣಿ (95)
Published on

Hindenburg Claims: ಈ ಹಿಂದೆ ಅದಾನಿ ಗ್ರೂಪ್ ಆಫ್ ಕಂಪನಿ ವಿರುದ್ಧ ತನ್ನ ಸ್ಫೋಟಕ ವರದಿಗಳನ್ನು ಬಿತ್ತರಿಸಿ, ದೊಡ್ಡ ಸಮರವೇ ಸಾರಿದ್ದ ಅಮೆರಿಕಾ ಮೂಲದ ಹೆಸರಾಂತ ಶಾರ್ಟ್​ ಸೆಲ್ಲರ್​ ಹಿಂಡೆನ್​ಬರ್ಗ್​ ರಿಸರ್ಚ್​ಗೆ ಇದೀಗ ಭಾರೀ ಮುಖಭಂಗವೇ ಉಂಟಾಗಿದೆ.

ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ ಆರೋಪಗಳನ್ನು ವಜಾಗೊಳಿಸಿರುವ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI), ಅದಾನಿ ಗ್ರೂಪ್ ಕಂಪನಿಗಳ ವಿರುದ್ಧದ ಎಲ್ಲ ಆರೋಪಗಳನ್ನು ತಳ್ಳಿಹಾಕಿದೆ. ಸೆಬಿ ಕೊಟ್ಟಿರುವ ಕ್ಲೀನ್ ಚಿಟ್ ಅನ್ನು ಸ್ವಾಗತಿಸಿರುವ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, "ನಮ್ಮ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು. ಸತ್ಯ ಮಾತ್ರ ಗೆಲ್ಲುತ್ತದೆ. ಪಾರದರ್ಶಕತೆ ಮತ್ತು ಸಮಗ್ರತೆಯು ಅದಾನಿ ಗ್ರೂಪ್ ಅನ್ನು ಸದಾ ವ್ಯಾಖ್ಯಾನಿಸಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಅದಾನಿ ಗ್ರೂಪ್ಸ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಹೊರಿಸಿದ್ದ ಹಿಂಡೆನ್​ಬರ್ಗ್​ ವರದಿಗಳು, ಅಂದಿನ ಮಟ್ಟಕ್ಕೆ ಜಾಲತಾಣಗಳಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು. ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿ, ಅದಾನಿ ಷೇರುಗಳ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇದಾದ ಬಳಿಕ ಹಿಂಡೆನ್​ಬರ್ಗ್​ ರಿಸರ್ಚ್​ ತನ್ನ ಸಂಸ್ಥೆಯನ್ನು ಮುಚ್ಚುವುದಾಗಿ ಹೇಳಿಕೊಂಡಿತು. ಇದು ಅನೇಕರಲ್ಲಿ ಅನುಮಾನ ಹುಟ್ಟುಹಾಕಿತು. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಕೂಡ ಹಾರಿದಾಡಿತ್ತು.

ಈ ವರ್ಷದ ಆರಂಭದಲ್ಲಿ ಈ ಗೊಂದಲಗಳಿಗೆ ಸ್ವತಃ ಹಿಂಡೆನ್​ಬರ್ಗ್ ಸಂಸ್ಥಾಪಕ ನಾಥನ್ ಆಂಡರ್ಸನ್ ಸ್ಪಷ್ಟನೆ ನೀಡಿ, “2017ರಲ್ಲಿ ತನ್ನ ರಿಸರ್ಚ್​ ಆರಂಭಿಸಿದ್ದ ಹಿಂಡೆನ್​ಬರ್ಗ್​ ಸಂಸ್ಥೆ, ಕಳೆದ ವರ್ಷಗಳಲ್ಲಿ ಎದುರಿಸಿದ ಒಂದಷ್ಟು ಚರ್ಚೆಗಳು ಮತ್ತು ಚಿಂತನೆಗಳ ಬಳಿಕ ಮುಚ್ಚುವ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net