ಮೋದಿ ಉಡುಪನ್ನು ಅಪಹಾಸ್ಯ ಮಾಡಿದವರ ಬಗ್ಗೆ ಅಸ್ಸಾಂ ಸಿಎಂ ಹೇಳಿದ್ದು ಹೀಗೆ…

Modi
Published on

ಅಸ್ಸಾಂ: ಖಾಸಿ ಉಡುಗೆ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪಹಾಸ್ಯ ಮಾಡುವ ಮೂಲಕ ಮೇಘಾಲಯದ ಸಂಸ್ಕೃತಿಯನ್ನು ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಅಗೌರವಿಸಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ, ಶಿಲ್ಲಾಂಗ್‌ಗೆ ಭೇಟಿ ನೀಡಿದ್ದಾಗ ಮೋದಿ ಧರಿಸಿದ್ದು ಮಹಿಳೆಯರ ಉಡುಪು ಎಂದು ಕೀರ್ತಿ ಆಜಾದ್ ಕಮೆಂಟ್ ಮಾಡಿದ್ದರು. ಇದಕ್ಕೆ ಬಿಜೆಪಿ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ವಿಚಾರವಾಗಿ ಕೀರ್ತಿ ಆಜಾಯ್ ಪ್ರತಿಕ್ರಿಯಿಸಿ, ನನಗೆ ಯಾವುದೇ ಉಡುಪಿಗೆ ಅಗೌರವಿಸುವ ಉದ್ದೇಶ ಇಲ್ಲ. ಪ್ರಧಾನಿ ಮೋದಿಯವರ ಫ್ಯಾಶನ್ ಪ್ರೇಮವನ್ನು ಹೇಳಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಕೀರ್ತಿಆಜಾದ್ ಅವರು ಮೇಘಾಲಯದ ಸಂಸ್ಕೃತಿ ಹಾಗೂ ಬುಡಕಟ್ಟು ಜನಾಂಗದ ವೇಷಭೂಷಣಗಳನ್ನು ಅಪಹಾಸ್ಯ ಮಾಢಿರುವುದು ದುಃಖಕರವಾಗಿದೆ. ಈ ಬಗ್ಗೆ ಕೀರ್ತಿಆಜಾದ್ ಸ್ಪಷ್ಟೀಕರಣ ನೀಡಬೇಕು. ನಿಮ್ಮ ಟೀಕೆ ನೋವುಂಟು ಮಾಡಿದ್ದು, ಜನರ ಮುಂದೆ ಕ್ಷಮೆಯಾಚಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಆಗ್ರಹಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net