ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಆತಂಕ; ಐದು ವರ್ಷಗಳಲ್ಲೇ ಅತಿ ಹೆಚ್ಚು ಡೆಂಘೆ ಪ್ರಕರಣ!

Dengue
Published on

ನವದೆಹಲಿ: ಉಸಿರುಗಟ್ಟಿಸುವ ವಾತಾವರಣವಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಎಂಬಷ್ಟು ಡೆಂಘೆ ಪ್ರಕರಣ ವರದಿಯಾಗದಿದ್ದು, ವಾಯುಮಾಲಿನ್ಯದ ಜತೆಗೆ ಜ್ವರ ಕೂಡ ಕಾಡುತ್ತಿದ್ದು, ಆತಂಕ ಹೆಚ್ಚಿಸಿದೆ.

ಈ ವರ್ಷ ದೆಹಲಿಯಲ್ಲಿ 5,270 ಡೆಂಘೆ ಪ್ರಕರಣಗಳು ವರದಿಯಾಗಿದ್ದು, ಸೋಮವಾರದ ವರದಿಯಲ್ಲಿ ಕಂಡುಬಂದಿದೆ. ಅದರಲ್ಲೂ ಕಳೆದ ಒಂದು ವಾರದಲ್ಲೇ 2,570 ಪ್ರಕರಣಗಳು ಕಂಡುಬಂದಿವೆ. ಕಳೆದ ಐದು ವರ್ಷಗಳಲ್ಲಿ ಯಾವತ್ತೂ ಇಷ್ಟೊಂದು ಡೆಂಘೆ ಪ್ರಕರಣಗಳು ಕಂಡುಬರದಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

ದೆಹಲಿಯಲ್ಲಿ 2016ರಲ್ಲಿ 4431, 2017ರಲ್ಲಿ 4726, 2018ರಲ್ಲಿ 2798, 2019ರಲ್ಲಿ 2036 ಮತ್ತು 2020ರಲ್ಲಿ 1072 ಡೆಂಘೆ ಪ್ರಕರಣಗಳು ವರದಿಯಾಗಿದ್ದವು. ಆದರೆ ಈ ವರ್ಷ ಏಕಾಏಕಿ ಡೆಂಘೆ ಪ್ರಕರಣ ಹೆಚ್ಚಾಗಿ, ಐದು ಸಾವಿರದ ಗಡಿಯನ್ನು ದಾಟಿರುವುದು ಸಾರ್ವಜನಿಕರಿಗಷ್ಟೇ ಅಲ್ಲದೆ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net