

ಮೂಗೂರು: ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ ಆವರಣದಲ್ಲಿ 6.50 ಲಕ್ಷ ರೂ.ವೆಚ್ಚದ ಹೈಮಾಸ್ಟ್ ದೀಪವನ್ನು ಬೆಂಗಳೂರಿನ ಉದ್ಯಮಿ ಹರೀಶ್ ಕೊಡುಗೆಯಾಗಿ ನೀಡಿದರು.
ಹಲವು ವರ್ಷಗಳಿಂದ ಹೈಮಾಸ್ಟ್ ದೀಪ ದುರಸ್ತಿ ಕಾಣದಾಗಿತ್ತು. ಜಾತ್ರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ದಾನಿಯೊಬ್ಬರು ಸಮಸ್ಯೆಗೆ ಪರಿಹಾರ ನೀಡಿದ್ದಾರೆ.
7 ಲಕ್ಷ ರೂ. ಸಂಗ್ರಹ: ದೇವಾಲಯದ ಆವರಣದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಾಡ ಕಚೇರಿ ಉಪ ತಹಸೀಲ್ದಾರ್ ಲಕ್ಷ್ಮೀ ಸಮ್ಮುಖದಲ್ಲಿ ಮಂಗಳವಾರ ನಡೆಯಿತು. 2 ತಿಂಗಳಲ್ಲಿ 7,35,335 ರೂ ಸಂಗ್ರಹವಾಗಿದೆ ಎಂದು ಆರ್‌ಐ ಬಸವರಾಜು ಮಾಹಿತಿ ನೀಡಿದರು. ಪಾರುಪತ್ತೇದಾರ ಸಾಗರ್, ಗೌಡರ ಎಂ.ಪಿ.ನಾಗರಾಜು, ವಿ.ಎ .ಆನಂದ್, ಸಂತೋಷ್, ಪದ್ಮಶ್ರೀ, ಸೌಮ್ಯಾ, ನೇಹಾ, ಕಾರ್ತಿಕ್, ಬ್ಯಾಂಕ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.