

ನವದೆಹಲಿ: ಅತಿದೊಡ್ಡ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ಪೊಲೀಸರು ಭಾರಿ ಪ್ರಮಾಣದ ಹೆರಾಯ್ನ್ ವಶಪಡಿಸಿಕೊಂಡಿದ್ದಾರೆ. ಎಷ್ಟೆಂದರೆ, ವಶಪಡಿಸಿಕೊಂಡಿರುವ ಹೆರಾಯ್ನ್ನ ಅಂದಾಜು ಮೌಲ್ಯವೇ 2,500 ಕೋಟಿ ರೂಪಾಯಿ.
ಹೌದು.. ದೇಶದ ರಾಜಧಾನಿಯಲ್ಲೇ ಅತ್ಯಧಿಕ ಎನ್ನಬಹುದಾದಷ್ಟು ಪ್ರಮಾಣದಲ್ಲಿ ಮಾದಕವಸ್ತುವನ್ನು ದೆಹಲಿ ವಿಶೇಷ ದಳದ ಪೊಲೀಸರು ವಶಪಡಿಸಿಕೊಂಡಿದ್ದಾರೆ. 354 ಕೆ.ಜಿ. ತೂಕದ ಹೆರಾಯ್ನ್ ವಶಕ್ಕೆ ಪಡೆಯುವ ಜತೆಗೆ ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಮೂವರಲ್ಲಿ ಒಬ್ಬ ಅಫ್ಘಾನಿಸ್ತಾನದವನಾಗಿದ್ದು, ಒಬ್ಬ ಪಂಜಾಬ್, ಇನ್ನೊಬ್ಬ ಕಾಶ್ಮೀರದವನಾಗಿದ್ದು, ಈ ಮಾದಕವಸ್ತು ಅಫ್ಘಾನಿಸ್ತಾನದಿಂದ ಇರಾನ್ ಮೂಲಕ ಮುಂಬೈಗೆ ಬಂದು ಭಾರತಕ್ಕೆ ಪ್ರವೇಶಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)