ನಾಯಕಿ ಜೊತೆ ಲಿಪ್ ಲಾಕ್.. ನನ್ನ ಮನೆಯಲ್ಲಿ ಜಗಳ!

nani
Published on

ಹೈದರಾಬಾದ್​: ಸಿನಿಮಾಗಳಲ್ಲಿ ಇತ್ತೀಚೆಗೆ ಲಿಪ್ ಲಾಕ್ ದೃಶ್ಯಗಳದ್ದೇ ಕಾರುಬಾರು. ಕೆಲವು ಸಿನಿಮಾಗಳಲ್ಲಿ ಕಥೆಯ ಬೇಡಿಕೆಗೆ ತಕ್ಕಂತೆ ಇಂತಹ ದೃಶ್ಯಗಳನ್ನು ಚಿತ್ರೀಕರಿಸಿದರೆ, ಇನ್ನು ಕೆಲವು ಸಿನಿಮಾಗಳಲ್ಲಿ ಮಸಾಲೆ ಹಾಕುವ ಹಾಗೆ ಚುಂಬಕ ದೃಶ್ಯಗಳನ್ನು ಹಾಕಲಾಗುತ್ತದೆ. ತೆಲುಗು ಚಿತ್ರ ನಟ ನಾನಿ ಕೂಡ ಹಲವು ಸಿನಿಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ್ದರು. ಇತ್ತೀಚಿನ ಅವರ ಚಿತ್ರ ‘ಹಾಯ್ ನಾನಾ’ ದಲ್ಲೂ ನಾಯಕಿಯ ಜೊತೆ ಲಿಪ್ ಲಾಕ್ ದೃಶ್ಯಗಳಿವೆ. ಇದೇ ವಿಷಯದ ಬಗ್ಗೆ ಟೀಸರ್ ಬಿಡುಗಡೆ ಸಮಾರಂಭದಲ್ಲಿ ‘ನಿಮ್ಮ ಪ್ರತಿ ಸಿನಿಮಾದಲ್ಲೂ ಲಿಪ್ ಲಾಕ್ ದೃಶ್ಯಗಳು ಕಾಣಸಿಗುತ್ತವೆ. ನಿರ್ದೇಶಕರು ಆ ದೃಶ್ಯಗಳನ್ನು ಸೇರಿಸುತ್ತಿದ್ದಾರೆಯೇ? ಅಥವಾ ಅಂತಹ ದೃಶ್ಯವನ್ನು ಹಾಕಲು ನೀವು ಕಂಡೀಷನ್ ಮಾಡುತ್ತಿದ್ದೀರಾ? ಎಂದು ಪತ್ರಕರ್ತರೊಬ್ಬರು ನಾನಿಗೆ ಕೇಳಿದರು.

ಅದಕ್ಕೆ ನಾನಿ ಉತ್ತರಿಸಿದ್ದು: ನನ್ನ ಎಲ್ಲಾ ಚಿತ್ರಗಳಲ್ಲಿ ಲಿಪ್‌ಲಾಕ್ ದೃಶ್ಯಗಳಿಲ್ಲ. ದಸರಾ ಸಿನಿಮಾ ಹಾಗೂ ಸುಂದರಿ.. ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಗಳಿಲ್ಲ. ಕೆಲವು ಸಿನಿಮಾಗಳಲ್ಲಿ ಅಂತಹ ದೃಶ್ಯಗಳಿವೆ. ಅಂತಹ ದೃಶ್ಯಗಳಲ್ಲಿ ನಟಿಸುವಾಗ ನಮ್ಮ ಮನೆಯಲ್ಲೂ ಹೊಡೆದಾಟಗಳು ನಡೆಯುತ್ತವೆ. ಈ ಸಿನಿಮಾ ಬಿಡುಗಡೆ ಬಳಿಕ ನಮ್ಮ ಮನೆಯಲ್ಲಿ ಜಗಳವಾಗಬಹುದು. ಅದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ. ಆದರೆ ನಾನೊಬ್ಬ ನಟ. ಕಥೆಗೆ ಬೇಕಾದ ದೃಶ್ಯಗಳಲ್ಲಿ ನಟಿಸುತ್ತೇನೆ.

ನನ್ನ ಹಿಂದಿನ ಚಿತ್ರಗಳನ್ನು ನೋಡಿದರೆ ಅದು ನಿಮಗೆ ಅರ್ಥವಾಗುತ್ತದೆ. ಚಿತ್ರಕ್ಕೆ ಆ ದೃಶ್ಯ ಅಗತ್ಯ ಎನಿಸಿದರೆ ಮಾತ್ರ ನಟಿಸುತ್ತೇನೆ. ನಾನು ಪ್ರಚಾರಕ್ಕಾಗಿ ಅಥವಾ ಮಸಾಲೆ ಸೇರಿಸಲು ನಟಿಸುವುದಿಲ್ಲ. ಟೀಸರ್ ನೋಡಿದ ನಂತರ ನಗುತ್ತಲೇ ಉತ್ತರಿಸಿದ ನಾನಿ. 'ಹಾಯ್ ನನ್ನ' ಬಗ್ಗೆ ಹೇಳುವುದಾದರೆ... ಇದೊಂದು ಫೀಲ್‌ಗುಡ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಇದರಲ್ಲಿ ನಾನಿ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೃಣಾಲು ಠಾಕೂರ್ ನಾಯಕಿ. ಬೇಬಿ ಕಿಯಾರಾ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಡಿಸೆಂಬರ್ 7 ರಂದು ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net