

ಆಂಧ್ರಪ್ರದೇಶ: ಮಾರ್ಚ್ 28ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಬ್ಲಾಕ್ಬಸ್ಟರ್ ಪ್ಯಾನ್ ಇಂಡಿಯಾ 'ಆಡುಜೀವಿತಂ' ಸಿನಿಮಾ, ಕೇವಲ ಬಾಕ್ಸ್ ಆಫೀಸ್ನಲ್ಲಿ ಮಾತ್ರ ಅಬ್ಬರಿಸಿದ್ದಲ್ಲದೇ, ಚಿತ್ರಪ್ರೇಮಿಗಳಿಂದಲೂ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತು. ಇದು ಖುಷಿ ವಿಷಯವೇ ಆದರೂ ಚಿತ್ರವಿನ್ನು ಒಟಿಟಿ ಪ್ಲಾಟ್ಫಾರ್ಮ್ಗೆ ಲಗ್ಗೆಯಿಡದಿರುವುದು ಅನೇಕರಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ.
ಹಲವು ಸಿನಿಮಾಗಳು ರಿಲೀಸ್ಗೂ ಮುನ್ನವೇ ತನ್ನ ಡಿಜಿಟಲ್ ಹಕ್ಕುಗಳನ್ನು ಹೆಸರಾಂತ ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಮಾರಾಟ ಮಾಡಿಕೊಂಡಿರುತ್ತದೆ. ಆದರೆ, 'ಆಡುಜೀವಿತಂ' ಮಾತ್ರ ಇಲ್ಲಿಯವರೆಗೆ ಯಾವುದೇ ಒಟಿಟಿಗೂ ಪ್ರವೇಶ ಪಡೆದಿಲ್ಲ. ಚಿತ್ರದ ಡಿಜಿಟಲ್ ಹಕ್ಕುಗಳು ಇನ್ನೂ ಖರೀದಿಸಲಾಗಿಲ್ಲ ಎಂಬುದೇ ಸಿನಿಪ್ರೇಕ್ಷಕರಲ್ಲಿ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ಹಿಂದೆ ಡಿಸ್ನಿ ಹಾಟ್ಸ್ಟಾರ್ ಸಿನಿಮಾದ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗಿತ್ತು. ಆದ್ರೆ, ಅಸಲಿಗೆ ಡಿಸ್ನಿ+ ಇದನ್ನು ಕೈಗೆತ್ತಿಕೊಂಡಿಲ್ಲ.
ಇನ್ನು ಇತ್ತೀಚಿನ ವರದಿ ಪ್ರಕಾರ, ಚಿತ್ರದ ಡಿಜಿಟಲ್ ಹಕ್ಕುಗಳನ್ನು ಯಾರು ಖರೀದಿಸಲು ಮುಂದಾಗಿಲ್ಲ ಎಂಬುದು ತಪ್ಪು ಮಾಹಿತಿ. ಅಸಲಿಗೆ ಚಿತ್ರತಂಡದ ನಿರ್ಧಾರವೇ ಸಿನಿಮಾ ಇನ್ನೂ ಒಟಿಟಿಗೆ ಲಗ್ಗೆಯಿಡದಿರಲು ಕಾರಣ ಎಂದು ಹೇಳಲಾಗಿದೆ. ನಿರ್ಮಾಪಕರು ಆಡುಜೀವಿತಂ ಚಿತ್ರವನ್ನು ಆಸ್ಕರ್ಗೆ ನಾಮನಿರ್ದೇಶನ ಮಾಡಿಸಲು ಯೋಜನೆ ಹಾಕಿಕೊಂಡಿರುವ ಹಿನ್ನೆಲೆ ಸದ್ಯ ಡಿಜಿಟಲ್ ಹಕ್ಕುಗಳನ್ನು ಇಂದಿಗೂ ಯಾವ ಒಟಿಟಿ ಪಾಲಾಗಲು ಬಿಟ್ಟಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).