

ಲಾಸ್ ಏಂಜೆಲಿಸ್: ಆಸ್ಕರ್ 2024ರ 96ನೇ ಅಕಾಡೆಮಿ ಪ್ರಶಸ್ತಿಗಳನ್ನು ಮಾರ್ಚ್ 11ರಂದು ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್‌ನಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಈ ವೇಳೆ ಯಾವೆಲ್ಲಾ ಕಲಾವಿದರಿಗೆ ಪ್ರಶಸ್ತಿ ಲಭಿಸಿತು, ಯಾವ ಸಿನಿಮಾಗಳಿಗೆ ಹೆಚ್ಚು ಅವಾರ್ಡ್ ಬಂದಿತು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ಪ್ರಖ್ಯಾತ ಸೆಲೆಬ್ರಿಟಿ ಹೋಸ್ಟ್ ಆದ ಜಿಮ್ಮಿ ಕಿಮ್ಮೆಲ್ ಈ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಶಸ್ತಿ ಪ್ರದಾನದ ವೇಳೆ ಹಾಲಿವುಡ್ನ ಹೆಸರಾಂತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಒಪೆನ್‌ಹೈಮರ್ ಚಿತ್ರವು ಇತರೆ ವಿಭಾಗಗಳನ್ನು ಸೇರಿ ಒಟ್ಟು ಏಳು ಪ್ರಶಸ್ತಿಯನ್ನು ಬಾಚಿಕೊಂಡಿದೆ.
96ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ವಿಜೇತರ ಸಂಪೂರ್ಣ ಪಟ್ಟಿ ಹೀಗಿದೆ:
ಅತ್ಯುತ್ತಮ ಚಿತ್ರ - ಓಪನ್‌ಹೈಮರ್
ಅತ್ಯುತ್ತಮ ನಿರ್ದೇಶನ - ಕ್ರಿಸ್ಟೋಫರ್ ನೋಲನ್ (ಓಪನ್‌ಹೈಮರ್)
ಅತ್ಯುತ್ತಮ ನಟ - ಸಿಲಿಯನ್ ಮರ್ಫಿ (ಓಪನ್‌ಹೈಮರ್)
ಅತ್ಯುತ್ತಮ ನಟಿ - ಎಮ್ಮಾ ಸ್ಟೋನ್ (ಪೂವರ್ ಥಿಂಗ್ಸ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ - ರಾಬರ್ಟ್ ಡೌನಿ ಜೂನಿಯರ್ (ಓಪನ್‌ಹೈಮರ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡವರ್ಸ್)
ಬೆಸ್ಟ್ ಓರಿಜಿನಲ್ ಸಾಂಗ್ - ಬಿಲ್ಲಿ ಎಲಿಶ್ (ವಾಸ್ ಐ ಮೇಡ್ ಫಾರ್? ಬಾರ್ಬಿಯಿಂದ)
ಅತ್ಯುತ್ತಮ ಧ್ವನಿ - ದ ಜೋನ್ ಆಫ್ ಇಂಟ್ರೆಸ್ಟ್
ಅತ್ಯುತ್ತಮ ಓರಿಜಿನಲ್ ಸ್ಕೋರ್ - ಓಪನ್ಹೈಮರ್ (ಲುಡ್ವಿಗ್ ಗೊರಾನ್ಸನ್)
ಅತ್ಯುತ್ತಮ ಸಾಕ್ಷ್ಯಚಿತ್ರ - 20 ಡೇಸ್ ಇನ್ ಮಾರಿಯುಪೋಲ್
ಬೆಸ್ಟ್ ಅನಿಮೇಟೆಡ್ ಫೀಚರ್ - ದಿ ಬಾಯ್ ಅಂಡ್ ದಿ ಹೆರಾನ್ (ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕಿ)
ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ - ದಿ ಲಾಸ್ಟ್ ರಿಪೈರ್ ಶಾಪ್ (ಬೆನ್ ಪ್ರೌಡ್‌ಫೂಟ್ ಮತ್ತು ಕ್ರಿಸ್ ಬೋವರ್ಸ್)
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ - ವಾರ್ ಈಸ್ ಓವರ್
ಅಂತರರಾಷ್ಟ್ರೀಯ ಚಲನಚಿತ್ರ - ದ ಜೋನ್ ಆಫ್ ಇಂಟ್ರೆಸ್ಟ್
ಬೆಸ್ಟ್ ಓರಿಜಿನಲ್ ಚಿತ್ರಕಥೆ - ಅನ್ಯಾಟಮಿ ಆಫ್ ಎ ಫಾಲ್
ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ - ಒಪೆನ್‌ಹೈಮರ್ (ಹೊಯ್ಟೆ ವ್ಯಾನ್ ಹೊಯ್ಟೆಮಾ)
ಅತ್ಯುತ್ತಮ ಸಂಕಲನ - ಓಪನ್‌ಹೈಮರ್, ಜೆನ್ನಿಫರ್ ಲೇಮ್
ಅತ್ಯುತ್ತಮ ನಿರ್ಮಾಣ ವಿನ್ಯಾಸ - ಪೂರ್ ಥಿಂಗ್ಸ್ (ಜೇಮ್ಸ್ ಪ್ರೈಸ್ ಮತ್ತು ಶೋನಾ ಹೀತ್)
ಅತ್ಯುತ್ತಮ ವಸ್ತ್ರ ವಿನ್ಯಾಸ - ಹಾಲಿ ವಾಡಿಂಗ್ಟನ್ (ಪೂವರ್ ಥಿಂಗ್ಸ್)
ಮೇಕಪ್ ಮತ್ತು ಕೇಶ ವಿನ್ಯಾಸ - ಪೂವರ್ ಥಿಂಗ್ಸ್ (ನಾಡಿಯಾ ಸ್ಟೇಸಿ, ಮಾರ್ಕ್ ಕೌಲಿಯರ್ ಮತ್ತು ಜೋಶ್ ವೆಸ್ಟನ್)
ವಿಷುಯಲ್ ಎಫೆಕ್ಟ್ಸ್ - ಗಾಡ್ಜಿಲ್ಲಾ ಮೈನಸ್ ಒನ್ (ತಕಾಶಿ ಯಮಝಕಿ, ಕಿಯೋಕೊ ಶಿಬುಯಾ, ಮಸಾಕಿ ತಕಹಾಶಿ ಮತ್ತು ತತ್ಸುಜಿ ನೊಜಿಮಾ)