2023ರ ಅಂತಿಮ ಮತದಾರರ ಪಟ್ಟಿ: ಇಲ್ಲಿದೆ ಜಿಲ್ಲಾವಾರು, ಕ್ಷೇತ್ರವಾರು ವಿವರ

ECI
Published on

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಮುಂದಿನ ತಿಂಗಳ ಇದೇ ಸಮಯಕ್ಕೆ ವಿಜೇತ ಪಕ್ಷಗಳ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಈ ನಡುವೆ ಈಗಾಗಲೇ ಚುನಾವಣೆ ಚಟುವಟಿಕೆಗಳು ಗರಿಗೆದರಿದ್ದು, ಚುನಾವಣಾ ಆಯೋಗವೂ ಎಲ್ಲ ತಯಾರಿ ಮಾಡಿಕೊಂಡಿದೆ.

ಚುನಾವಣೆ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ತನ್ನ ವೆಬ್​ಸೈಟ್​ನಲ್ಲಿ ಪ್ರಕಟ ಮಾಡಿದ್ದು, ಮತದಾರರ ವಿವರವನ್ನು ಜಿಲ್ಲಾವಾರು, ಕ್ಷೇತ್ರವಾರು ಹಾಗೂ ಮತಗಟ್ಟೆಗಳಿಗೆ ಅನುಗುಣವಾಗಿ ವೀಕ್ಷಿಸಬಹುದು.

ಮತದಾರರು ಈ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ ಪರಿಶೀಲಿಸಿಕೊಳ್ಳುವ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತ ಪಡಿಸಿಕೊಳ್ಳಬಹುದು.

ಅಂತಿಮ ಮತದಾರರ ಪಟ್ಟಿ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ: https://ceo.karnataka.gov.in/FinalRoll_2023/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net