ಮೊಘಲ್​ ಶೈಲಿಯ​ ಚಿಕನ್​ ಬಿರಿಯಾನಿ ಮಾಡುವುದು ಸುಲಭ; ಇಲ್ಲಿದೆ ಸಿಂಪಲ್​ ರೆಸಿಪಿ

Untitled-design-68-1
Published on

ಬಿರಿಯಾನಿ ಎಂದರೆ ಬಾಯಲ್ಲಿ ನೀರು ಬರುತ್ತದೆ. ನಾನ್​ ವೆಜ್​ ಪ್ರಿಯರಿಗಂತೂ ವಾರಂತ್ಯದಲ್ಲಿ ಬಿರಿಯಾನಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಅನ್ನಿಸುತ್ತದೆ. ಎಷ್ಟೋ ಮಾದರಿಯ ಬಿರಿಯಾನಿ ರೆಸಿಪಿ ಇದೆ. ಚಿಕನ್​, ಮಟನ್​, ಫಿಶ್​​ ಬಿರಿಯಾನಿ ಅಂತು ಎಲ್ಲರಿಗೂ ಅಚ್ಚುಮೆಚ್ಚು. ಬಿರಿಯಾನಿಯಲ್ಲಿ ಸಾಕಷ್ಟು ವೆರೈಟಿಸ್ ಇದೆ. ಅದರಲ್ಲಿ ಒಂದು ಮೊಘಲ್​ ಸ್ಟೈಲ್​ ಬಿರಿಯಾನಿ. ಇದನ್ನು ಮಾಡುವುದು ಹೇಗೆ.. ಇದರ ಸಿಂಪಲ್​​ ರೆಸಿಪಿಯನ್ನು ಇಲ್ಲಿ ನೀಡಲಾಗಿದೆ. ಈ ವೀಕೆಂಡ್​ನಲ್ಲಿ ನೀವೂ ಟ್ರೈ ಮಾಡಿ ಟೇಸ್ಟ್​ ಮಾಡಿ.. ​

  • ಚಿಕನ್​
  • ಈರುಳ್ಳಿ
  • ಮೊಸರು
  • ಧನಿಯಾ ಪುಡಿ
  • ಚಿಲ್ಲಿ ಪೌಡರ್​
  • ಗರಂ ಮಸಾಲ
  • ಉಪ್ಪು
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್​
  • ಹಸಿಮೆಣಸಿನಕಾಯಿ ಪೇಸ್ಟ್​​
  • ಏಲಕ್ಕಿ, ಬೇ ಎಲೆ, ದಾಲ್ಚಿನ್ನಿ, ಜೀರಿಗೆ
  • ಪುದೀನ, ಕೊತ್ತಂಬರಿ ಸೊಪ್ಪು
  • ಕೇಸರಿ ನೀರು
  • ದ್ರಾಕ್ಷಿ
  • ಅಡುಗೆ ಎಣ್ಣೆ

ಮೊಘಲ್​ ಸ್ಟೈಲ್​ ಚಿಕನ್​ ಬಿರಿಯಾನಿ ಮಾಡುವ ವಿಧಾನ:

  • ಅಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಒಂದು ಪ್ಯಾನ್​ನಲ್ಲಿ ನೀರನ್ನು ಇಟ್ಟು ಕುದಿಸಿ. ಅದಕ್ಕೆ ನೆನಸಿಟ್ಟಿದ್ದ ಅಕ್ಕಿ ಮತ್ತು ಉಪ್ಪು ಸೇರಿಸಿ. ಮುಕ್ಕಾಲು ಭಾಗ ಅಕ್ಕಿ ಬೇಯಿಸಿ.
  • ಕನ್ ಅನ್ನು ಮೊಸರು, ಧನಿಯಾ ಪುಡಿ, ಸ್ವಲ್ಪ ಚಿಲ್ಲಿಪೌಡರ್​​, ಉಪ್ಪು, ಗರಂ ಮಸಾಲಾ ಪುಡಿಯೊಂದಿಗೆ ಮಿಶ್ರಣ ಮಾಡಿ 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
  • ಒಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ನಂತರ ಏಲಕ್ಕಿ, ಬೇ ಎಲೆ, ದಾಲ್ಚಿನ್ನಿ, ಜೀರಿಗೆ ಹಾಕಿ ಫ್ರೈ ಮಾಡಿ. ಬಳಿಕ ಶುಂಠಿ ಬೆಳ್ಳುಳ್ಳಿ, ಮೆಣಸಿನಕಾಯಿ ಪೇಸ್ಟ್​​ ಸೇರಿಸಿ 15 ನಿಮಿಷ ಮತ್ತು ಮೆಣಸಿನಕಾಯಿ ಪೇಸ್ಟ್ ಸೇರಿಸಿ ಮತ್ತು 30 ಸೆಕೆಂಡುಗಳ ಕಾಲ ಫ್ರೈ ಮಾಡಿ.
  • ಅದಕ್ಕೆ ಗೋಡಂಬಿ ಪೇಸ್ಟ್ ಸೇರಿಸಿ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ನಂತರ ಮ್ಯಾರಿನೇಟ್​​ ಮಾಡಿರುವ ಚಿಕನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕತ್ತರಿಸಿದ ಪುದೀನ ಮತ್ತು ಕೊತ್ತಂಬರಿಯನ್ನು ಸೇರಿಸಿ. ಬಳಿಕ ನೀರನ್ನು ಸೇರಿಸಿ. ಚಿಕನ್​ ಬೇಯುವವರೆಗೂ ಬಿಡಿ. ಬಳಿಕ ಗ್ರೇವಿ ಸಿದ್ಧವಾಗುತ್ತದೆ.
  • ಬಳಿಕ ಮತ್ತೊಂದು ಪಾತ್ರೆಯಲ್ಲಿ ಚಿಕನ್​ ಗ್ರೇವಿಯನ್ನು ಕೆಳಭಾಗದಲ್ಲಿ ಹಾಕಿ ಅದರ ಮೇಲೆ ಮುಕ್ಕಾಲು ಭಾಗ ಬೇಯಿಸಿ ಇಟ್ಟಿರುವ ಅಕ್ಕಿ, ಕೇಸರಿ ನೀರು, ದ್ರಾಕ್ಷಿ, ಹುರಿದ ಈರುಳ್ಳಿ ಹಾಕಿ ಬಳಿಕ ಮತ್ತೊಂದು ಲೇಯರ್​ ಚಿಕನ್​ ಗ್ರೇವಿಯನ್ನು ಹಾಕಿ ಅದರ ಮೇಲೆ ಮುಕ್ಕಾಲು ಭಾಗ ಬೇಯಿಸಿ ಇಟ್ಟಿರುವ ಅಕ್ಕಿ, ಕೇಸರಿ ನೀರು, ದ್ರಾಕ್ಷಿ, ಹುರಿದ ಈರುಳ್ಳಿ ಹಾಕಿ.
  • ಬಳಿಕ ಈ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿ, ಹೊಗೆ ಹೊರಗೊಗದಂತೆ ಬಟ್ಟೆಯಿಂದ ಕಟ್ಟಿ. 10 ರಿಂದ 15 ನಿಮಿಷ ಕಾಲ ಕಡಿಮೆ ಉರಿಯಲ್ಲಿ ಬಿಡಿ. ಬಳಿಕ ಮುಚ್ಚಲ ತೆಗೆದು ನಿಧಾನವಾಗಿ ಮಿಕ್ಸ್​ ಮಾಡಿ. ಒತ್ತಡ ಹಾಕಿ ಮಿಕ್ಸ್​ ಮಾಡಿದರೆ ಅನ್ನ ಮುದ್ದೆಯಂತಾಗುತ್ತದೆ. ಆದ್ದರಿಂದ ನಿಧಾನವಾಗಿ ಮಿಶ್ರಣ ಮಾಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net