ಕಾಫಿಗಾಗಿ 9.4 ಲಕ್ಷ ರೂ. ಖರ್ಚು ಮಾಡಿದ ಮಹಿಳೆ; ಕೂಪನ್​​ ಜತೆಗೆ ಜಾಹೀರಾತು ಮಾಡಿ ಕಂಪನಿಯ ಸಂಭ್ರಮಾಚರಣೆ

Untitled-design-67
ಸಾಂದರ್ಭಿಕ ಚಿತ್ರ
Published on

ಮುಂಬೈ: ಮನೆಯಲ್ಲಿ ಬಿಸಿ ಬಿಸಿ ಅಡುಗೆ ಮಾಡಿ ತಿನ್ನುವ ಕಾಲ ಬದಲಾಗಿ, ಈಗ ಹೊರಗೆ ಹೋಗದೆ ಮನೆಯಲ್ಲೇ ಕುಳಿತು ಬೇಕಾದ ತಿಂಡಿಯನ್ನು ಆನ್​ಲೈನ್​ ಫುಡ್​ ಆ್ಯಪ್​ಗಳ ಮೂಲಕ ಆರ್ಡರ್​ ಮಾಡಿ ಟೇಸ್ಟ್​ ಅನ್ನು ಎಂಜಾಯ್​ ಮಾಡುತ್ತಾರೆ.

ಬಿರಿಯಾನಿ, ಬರ್ಗರ್​​, ಪಿಜ್ಜಾ, ಟಿಫನ್​​​ ಆರ್ಡರ್​ ಮಾಡುವ ಮೂಲಕ ಎಷ್ಟು ಖರ್ಚು ಮಾಡಬಹುದು..? ಇದೆಲ್ಲಾ ಆಲೋಚಿಸುವುದು ಸ್ವಲ್ಪ ಕಷ್ಟ. ಹಾಗಾದ್ರೆ ಕಾಫಿಗಾಗಿ ಎಂದುಕೊಂಡರೆ ಯಾರಾದರೂ ಎಷ್ಟು ಖರ್ಚು ಮಾಡುತ್ತಾರೆ? ಅಬಬ್ಬಾ ಅಂದರೆ 400 ರೂಪಾಯಿಯಿಂದ 500 ರೂಪಾಯಿ ಖರ್ಚು ಮಾಡುತ್ತಾರೆ ಎಂದು ಅಂದಾಜಿಸಬಹುದು.

ಆದರೆ ಇಲ್ಲೊಬ್ಬ ಮಹಿಳೆ ಕಾಫಿಗಾಗಿ ಬರೋಬರಿ 9.4 ಲಕ್ಷ ರೂ. ಖರ್ಚು ಮಾಡಿದ್ದಾರೆ. ಮುಂಬೈ ಮೂಲದ ಮಿಶ್ಕತ್ ಎಂಬ ಮಹಿಳೆಗೆ ಸ್ಟಾರ್ ಬಕ್ಸ್ ಕಾಫಿ ಎಂದರೆ ತುಂಬಾ ಇಷ್ಟ. ಹಾಗಾಗಿ ಝೊಮಾಟೊದಲ್ಲಿ ಪ್ರತಿದಿನ ಕಾಫಿ ಆರ್ಡರ್ ಮಾಡುತ್ತಿದ್ದರು. 9.4 ಲಕ್ಷ ಮೌಲ್ಯದ ಸ್ಟಾರ್ ಬಕ್ಸ್ ಕಾಫಿ ಆರ್ಡರ್​ ಮಾಡಿರುವ ಕಸ್ಟಮರ್​​​ಗಾಗಿ ಕಂಪನಿ ಸಂಭ್ರಮಾಚರಣೆ ಮಾಡಿದೆ. ಸಂಭ್ರಮಾಚರಣೆ ಎಂದರೆ ಕೇಕ್​ ಕಟ್​​ ಮಾಡಿಸಿರುವುದಲ್ಲಾ. ಕಂಪನಿಯು ತನ್ನ ವಿಶೇಷ ಗ್ರಾಹಕರಿಗಾಗಿ ವಿಶೇಷ ಜಾಹೀರಾತನ್ನು ಮಾಡಿದೆ. ಸದ್ಯ ಈ ಜಾಹಿರಾತು ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ಅದಷ್ಟೆ ಅಲ್ಲ, ಕಂಪನಿಯು ಮಿಶ್ಕತ್ ಹೆಸರಿನಲ್ಲಿ ಕೂಪನ್ ಕೋಡ್ ಅನ್ನು ಸಹ ರಚಿಸಿದೆ. ‘ಮಿಶ್ 100’ ಎಂಬ ಕೂಪನ್ ಕೋಡ್‌ನೊಂದಿಗೆ ನೀವು ಸ್ಟಾರ್ ಬಕ್ಸ್‌ನಲ್ಲಿ ಡ್ರಿಂಕ್​​ ಆರ್ಡರ್ ಮಾಡಿದರೆ, ಅವರು 100 ರೂಪಾಯಿ ರಿಯಾಯಿತಿಯನ್ನು ನೀಡುತ್ತಿದ್ದಾರೆ. ಸದ್ಯ ಈ ಮಿಶ್​​ 100 ಕೂಪನ್​​ಗೆ ಕಾರಣರಾದ ಮಿಶ್ಕತ್​​ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್​​ ಆಗಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net