ಹೈದರಾಬಾದ್: ಮ್ಯಾನ್ ಆಫ್ ಮಾಸ್ ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಸಿನಿಮಾ ಬರಲಿದೆ ಎಂಬ ಸುದ್ದಿ ಕಳೆದ ವರ್ಷದಿಂದಲೂ ಟಾಲಿವುಡ್ ಅಂಗಳದಲ್ಲಿ ಹರಿದಾಡುತಿತ್ತು. ಇದು ಎನ್‌ಟಿಆರ್ ಅವರ 31ನೇ ಚಿತ್ರವಾಗಲಿದೆ. ಎನ್‌ಟಿಆರ್ 31ನೇ ಚಿತ್ರದ ಪೂಜಾ ಕಾರ್ಯಕ್ರಮಗಳು ಸದ್ದಿಲ್ಲದೆ ಶುಕ್ರವಾರ (ಆಗಸ್ಟ್ 9) ರಾಮನಾಯ್ಡು ಸ್ಟುಡಿಯೋದಲ್ಲಿ ನೆರೆವೇರಿತು.
ಇದನ್ನು ಓದಿ: ಅಭಿಮಾನಿಗಳಿಗೆ ಮಾದರಿ ಆಗಬೇಕಾದ್ರೆ ಇದನ್ನು ಮಾಡಬಾರದು; ಜಾನ್ ಅಬ್ರಾಹಂ
ಪೂಜಾ ಕಾರ್ಯಕ್ರಮಕ್ಕೆ ಎನ್‌ಟಿಆರ್ ತಮ್ಮ ಪತ್ನಿ ಪ್ರಣತಿ ಹಾಗೂ ಇಬ್ಬರು ಪುತ್ರರೊಂದಿಗೆ ಪಾಲ್ಗೊಂಡಿದ್ದರು. ಪ್ರಶಾಂತ್ ನೀಲ್, ಕಲ್ಯಾಣ್ ರಾಮ್ ಮತ್ತು ಇತರ ಕೆಲವು ನಟರು ಉಪಸ್ಥಿತರಿದ್ದರು. ಈ ಪ್ಯಾನ್ ಇಂಡಿಯಾ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಆದರೆ ಯಂಗ್ ಟೈಗರ್ ಎನ್‌ಟಿಆರ್ 31 ಸಿನಿಮಾ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅಭಿಮಾನಿಗಳ ಈ ಸಂಭ್ರಮಕ್ಕೆ ಮುಖ್ಯ ಕಾರಣ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿರುವುದು. ಹೌದು ಈ ಸಿನಿಮಾ ಜನವರಿ 9, 2026ರಂದು ರಿಲೀಸ್ ಆಗಲಿದೆ.
ಈ ಹಿಂದೆ ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಈ ಸಿನಿಮಾದ ಕಥೆ ಬಗ್ಗೆ ಮಾತನಾಡಿ, ಎಲ್ಲರೂ ಈ ಸಿನಿಮಾವನ್ನು ಆ್ಯಕ್ಷನ್ ಸಿನಿಮಾ ಎಂದು ಪರಿಗಣಿಸುತ್ತಾರೆ ಎಂಬುದು ನನಗೆ ಗೊತ್ತಿದೆ. ಆದರೆ, ಅವರ ಊಹೆಯಂತೆ ಹೋಗಲು ಇಷ್ಟವಿಲ್ಲ. ಇದು ಹೊಸ ಕಥೆ, ವಿಭಿನ್ನ ಭಾವನೆಗಳಿಂದ ಕೂಡಿದ ವೈವಿಧ್ಯಮಯ ಸಿನಿಮಾವಾಗಲಿದೆ ಎಂದು ಹೇಳಿದ್ದರು. ಆದ್ದರಿಂದ ನಂದಮೂರಿ ಅಭಿಮಾನಿಗಳು ಈ ಚಿತ್ರದಲ್ಲಿ ಎನ್‌ಟಿಆರ್ ಪಾತ್ರವನ್ನು ನೀಲ್ ಹೇಗೆ ಮಾಡಲಿದ್ದಾರೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.
ಸದ್ಯ ಎನ್ ಟಿಆರ್ ತಮ್ಮ ಬಾಲಿವುಡ್ ಚೊಚ್ಚಲ ಚಿತ್ರ ವಾರ್ 2ನಲ್ಲಿ ಶೂಟಿಂಗ್ನಲ್ಲಿ ಬಿಜಿಯಿದ್ದಾರೆ. ಅಲ್ಲದೆ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದೇವರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಜೂ.ಎನ್ಟಿಆರ್ಗೆ ಜಾನ್ವಿಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ದೇವರ ಸಿನಿಮಾ ಎರಡು ಭಾಗಗಳಲ್ಲಿ ತೆರೆ ಕಾಣುತ್ತಿದೆ. ಮೊದಲ ಭಾಗ ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್)
ಹೆಣ್ಣುಮಕ್ಕಳ ಮದುವೆ ವಯಸ್ಸು 9 ವರ್ಷಕ್ಕೆ ಇಳಿಕೆ!; ಪ್ರಸ್ತಾವಿತ ಕಾನೂನಿನ ವಿರುದ್ಧ ಹೋರಾಟ