ಮುಂಬೈ: ಬಿಟೌನ್ನ ಫಿಟ್ನೆಸ್ ನಟರಲ್ಲಿ ಜಾನ್ ಅಬ್ರಹಾಂ ಕೂಡ ಒಬ್ಬರು. ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳಲು ವ್ಯಾಯಾಮ ಮುಖ್ಯ ಎಂದು ಅವರು ಹೇಳುತ್ತಾರೆ. ಪಾನ್ ಮಸಾಲಾ ಜಾಹೀರಾತಿನಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ: ನೀರಜ್ ತಾಯಿಯ ಹೇಳಿಕೆಗೆ ‘ನಮೋ’ ಶ್ಲಾಘನೆ; ಚಿನ್ನದ ಹುಡುಗನಿಗೆ ಫೋನ್ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?
ಇತ್ತೀಚಿನ ಸಂದರ್ಶನವೊಂದರಲ್ಲಿ ಪಾನ್ ಮಸಾಲಾ ಬ್ರಾಂಡ್‌ಗಳನ್ನು ಅನುಮೋದಿಸುವ ನಟರ ವಿರುದ್ಧ ಜಾನ್ ಅಬ್ರಾಹಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ನಾನು ಎಂದಿಗೂ ಹಾಗೆ ಮಾಡುವುದಿಲ್ಲ. ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಉತ್ಪನ್ನಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಅವರು ಹೇಳಿದರು.
ನಾನು ನನ್ನ ಅಭಿಮಾನಿಗಳಿಗೆ ಮಾದರಿಯಾಗಲು ಬಯಸುತ್ತೇನೆ. ಅವರು ನನ್ನನ್ನು ಅನುಸರಿಸುವಂತೆ ಇರಲು ಬಯಸುತ್ತೇನೆ. ನಾನು ನನ್ನ ಜೀವನವನ್ನು ಪ್ರಾಮಾಣಿಕವಾಗಿ ಬದುಕಿದರೆ ಆಗ ಅಭಿಮಾನಿಗಳಿಗೆ ಉತ್ತಮ ಮಾದರಿಯಾಗಬಲ್ಲೆ. ಆದರೆ ನಾನು ಸಾರ್ವಜನಿಕವಾಗಿ ನನ್ನ ನಕಲಿ ಆವೃತ್ತಿಯನ್ನು ತೋರಿಸಿ, ನನ್ನ ಬೆನ್ನಿನ ಹಿಂದೆ ಬೇರೆ ವ್ಯಕ್ತಿಯಂತೆ ವರ್ತಿಸಿದರೆ ಅವರು ಅದನ್ನು ಗುರುತಿಸುತ್ತಾರೆ ಎಂದು ತಿಳಿಸಿದರು.
ಜನರು ಫಿಟ್ನೆಸ್ ಬಗ್ಗೆ ಮಾತನಾಡುತ್ತಾರೆ. ನಂತರ ಪಾನ್ ಮಸಾಲಾವನ್ನು ಜಾಹೀರಾತು ಮಾಡುತ್ತಾರೆ. ನಾನು ನನ್ನ ಸಹನಟರನ್ನು ಪ್ರೀತಿಸುತ್ತೇನೆ. ಇಲ್ಲಿ ಯಾರಿಗೂ ಅಗೌರವ ತೋರುತ್ತಿಲ್ಲ. ನಾನು ನನ್ನ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಿಕರಣ ನೀಡಿದ್ದಾರೆ. ಆದರೆ ನಾನು ಸಾವನ್ನು ಮಾರುವುದಿಲ್ಲ, ಏಕೆಂದರೆ ಇದು ತತ್ವದ ವಿಷಯವಾಗಿದೆ. ಪಾನ್ ಮಸಾಲಾ ಉದ್ಯಮದ ವಾರ್ಷಿಕ ವಹಿವಾಟು 45 ಸಾವಿರ ಕೋಟಿ ರೂಪಾಯಿ ಎಂಬುದು ನಿಮಗೆ ಗೊತ್ತೆ. ಇದರರ್ಥ ಸರ್ಕಾರವು ಅದನ್ನು ಬೆಂಬಲಿಸುತ್ತಿದೆ ಮತ್ತು ಆದ್ದರಿಂದ ಇದು ಕಾನೂನುಬಾಹಿರವಲ್ಲ.ನೀವು ಸಾವನ್ನು ಮಾರುತ್ತಿದ್ದೀರಿ, ನೀವು ಅದರೊಂದಿಗೆ ಹೇಗೆ ಬದುಕಬಹುದು ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ಶಾರೂಖ್ ಖಾನ್ ಅವರು ಪಾನ್ ಮಸಾಲಾ ಜಾಹೀರಾತಿಗಾಗಿ ಸಾಕಷ್ಟು ಟ್ರೋಲ್ ಆಗಿದ್ದರು. ಇದರ ನಂತರ ಅಕ್ಷಯ್ ಅವರು ಯಾರನ್ನೂ ನೋಯಿಸಲು ಬಯಸುವುದಿಲ್ಲ ಎಂದು ಹೇಳಿಕೆ ನೀಡಿದ, ಈಗ ಅವರು ಈ ಬ್ರಾಂಡ್‌ನೊಂದಿಗೆ ತಮ್ಮ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ. (ಏಜೆನ್ಸೀಸ್)
ಮಾಜಿ ಟ್ರೈನಿ IAS ಅಧಿಕಾರಿ ಪೂಜಾ ಖೇಡ್ಕರ್ ತಂದೆ ವಿರುದ್ಧ ಎಫ್ಐಆರ್; ಪ್ರಕರಣ ಹೀಗಿದೆ..