ವಿಜಯ್​ ನಟನೆಯ 'ದಳಪತಿ 68'ನಿಂದ ಹೊರಬಿತ್ತು ಹೊಸ ಅಪ್ಡೇಟ್​!

Untitled design (31)
Published on

ತಮಿಳುನಾಡು: ಕಾಲಿವುಡ್​ನ ಸ್ಟಾರ್​ ನಟ ದಳಪತಿ ವಿಜಯ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ 'ದಳಪತಿ 68' ಇದೀಗ ಕಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಸಿನಿಮಾ ಕುರಿತಂತೆ ಸದ್ಯ ಹೊಸ ಮಾಹಿತಿಯೊಂದು ಲಭಿಸಿದೆ.

ಇತ್ತೀಚೆಗಷ್ಟೇ ಲೋಕೇಶ್ ಕನಕರಾಜ್ ನಿರ್ದೇಶನದ, ವಿಜಯ್​ ಮತ್ತು ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿದ ಪ್ಯಾನ್​ ಇಂಡಿಯಾ 'ಲಿಯೋ' ಜಾಗತಿಕವಾಗಿ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಯಶಸ್ಸನ್ನು ಗಳಿಸಿತು. ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿದ ಲಿಯೋ, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಕೂಡ ಪಡೆದುಕೊಂಡಿತು.

'ದಳಪತಿ 68' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿರುವ ನಟ ವಿಜಯ್, ಶೂಟಿಂಗ್​ ಸಲುವಾಗಿ ಬ್ಯಾಂಕಾಕ್‌ ತೆರಳಿ, ಇಂದು ಕೆಲಸ ಮುಗಿಸಿ ಚೆನ್ನೈಗೆ ಮರಳಿದ್ದಾರೆ. ಚಿತ್ರದ ಪ್ರಮುಖ ವೇಳಾಪಟ್ಟಿಗಾಗಿ ಥಾಯ್ಲೆಂಡ್‌ಗೆ ಹೋಗಿ, ತಮ್ಮ ಭಾಗದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ವಾಪಾಸ್ ಆಗಿದ್ದಾರೆ. ಈ ವೇಳಾಪಟ್ಟಿಯಲ್ಲಿ ಕೆಲವು ಆಕ್ಷನ್ ಭಾಗಗಳನ್ನು ಚಿತ್ರೀಕರಿಸಲಾಗಿದೆ ಮತ್ತು ಮುಂದಿನ ವೇಳಾಪಟ್ಟಿ ಶೀಘ್ರದಲ್ಲೇ ಚೆನ್ನೈನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಸಿನಿಮಾಗೆ ನಾಯಕಿಯಾಗಿ ಮೀನಾಕ್ಷಿ ಚೌಧರಿ ಆಯ್ಕೆಯಾಗಿದ್ದು, ಎಜಿಎಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ 'ದಳಪತಿ 68' ನಿರ್ಮಾಣವಾಗುತ್ತಿದೆ. ಈ ಹೈ-ಬಜೆಟ್ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಮೈಕ್ ಮೋಹನ್, ಜಯರಾಮ್, ಸ್ನೇಹಾ, ಲೈಲಾ, ಯೋಗಿಬಾಬು, ವಿಟಿವಿ ಗಣೇಶ್, ಅಜ್ಮಲ್ ಅಮೀರ್, ವೈಭವ್, ಪ್ರೇಮ್ಗಿ, ಅಜಯ್ ರಾಜ್, ಅರವಿಂದ್ ಆಕಾಶ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net