ಒಂದೆರಡು ಬೈ ಎಲೆಕ್ಷನ್ ಗೆಲ್ಲಿಸಿದಾಕ್ಷಣ ದೊಡ್ಡ ಸಂಘಟನಾ ಚುತುರ ಎನ್ನಲಾಗದು; ಕೆ.ಎನ್.ರಾಜಣ್ಣ ವ್ಯಂಗ್ಯ

KNR..1
Published on

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ತಂದು ಕೂರಿಸಿದೆ. ಈ ಬಗ್ಗೆ ಪಕ್ಷದ ಮುಖಂಡರಲ್ಲಿಯೇ ಅಸಮಧಾನ ಬುಗಿಲೆದ್ದಿದೆ ಎಂದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದೆರಡು ಬೈ ಎಲೆಕ್ಷನ್ ಗೆಲ್ಲಿಸಿದಾಕ್ಷಣ ದೊಡ್ಡ ಸಂಘಟನಾ ಚುತುರ ಎಂದು ಸರ್ಟಿಪಿಕೇಟ್ ನೀಡಲಾಗದು ಎಂದು ಮೊದಲಿಸಿದರು.

ಇತ್ತೀಚಿನ ಬೈ ಎಲೆಕ್ಷನಗಳು ಯಾವ ಆಧಾರದ ಮೇಲೆ ಗೆಲುವು ಪಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಂಜನಗೂಡು,ಗುAಡ್ಲುಪೇಟೆ ಬೈ ಎಲೆಕ್ಷನ್ ಕಾಂಗ್ರೆಸ್ ಗೆಲುವು ಸಾಧಿಸಿತ್ತು.ಆರೇ ತಿಂಗಳಿಗೆ ಮತ್ತೆ ಸೋಲಾಯಿತು. ಬಳ್ಳಾರಿ ಲೋಕಸಭಾ ಬೈ ಎಲೆಕ್ಷನ್ 2 ಲಕ್ಷ ಮತಗಳಿಂದ ಗೆದ್ದರೂ, ಸಾವತ್ರಿಕ ಚುನಾವಣೆಯಲ್ಲಿ ಸೋತೆವು. ಬೈ ಎಲೆಕ್ಷನ್‌ನ್ನೇ ಗೆಲುವೇ ಮಾನದಂಡ ಅಷ್ಟು ಸರಿಯಲ್ಲ ಎಂದರು.

ಮುAದೆ ದೊಡ್ಡ ಸವಾಲಿದೆ, ಯಡಿಯೂರಪ್ಪ ಅವರಿಗೆ 50 ವರ್ಷದ ಹೋರಾಟ ಇತ್ತು ಆದರೆ, ವಿಜಯೇಂದ್ರAಗೆ ಯಡಿಯೂರಪ್ಪ ಹೆಸರೇ ಬಲ. ಪಕ್ಷ ಬಲಗೊಳ್ಳದಿದ್ದರೆ ಅಧ್ಯಕ್ಷ ಸ್ಥಾನ ನೀಡಿ ಏನು ಪ್ರಯೋಜನ, ಕಾದು ನೋಡುವ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net