ಮಹಿಳೆಯರಿಗೇ ಮೀಸಲಾದ ಡಿಜಿಟಲ್ ವೇದಿಕೆ : 'ಹರ್​ಸರ್ಕಲ್'

Her circle
Published on

ನವದೆಹಲಿ: ಈ ಬಾರಿಯ ವಿಶ್ವ ಮಹಿಳಾ ದಿನದ ಸಂದರ್ಭದಲ್ಲಿ, ರಿಲೆಯನ್ಸ್ ಫೌಂಡೇಶನ್​, ಮಹಿಳೆಯರಿಗೇ ಮೀಸಲಾದ ಸೋಷಿಯಲ್ ನೆಟ್ವರ್ಕಿಂಗ್ ಸ್ಪೇಸ್​ ಒದಗಿಸುವ ಮತ್ತು ಆರೋಗ್ಯ, ಜೀವನಶೈಲಿ, ಉದ್ಯೋಗ, ಫಿಟ್​ನೆಸ್​ ಮುಂತಾಗಿ ಸಮಗ್ರ ಮಾಹಿತಿ ಒದಗಿಸುವ ವಿಶೇಷ ಡಿಜಿಟಲ್ ವೇದಿಕೆಯನ್ನು ರೂಪಿಸಿದೆ. "ಹರ್​ಸರ್ಕಲ್​"(HerCircle.in) ಎಂಬ ಹೆಸರಿನಲ್ಲಿ ಮಹಿಳೆಯರಿಗೇ ಮೀಸಲಾದ, ಸ್ಮಾರ್ಟ್ ಫೋನ್​ಗಳಲ್ಲಿ ಲಭ್ಯವಾಗುವ ಆ್ಯಪ್​, ಮತ್ತು ವೆಬ್​ಸೈಟ್​ಗಳಿಗೆ ನೀತಾ ಅಂಬಾನಿ ಚಾಲನೆ ನೀಡಿದ್ದಾರೆ.

'ಹರ್​ಸರ್ಕಲ್​​'ನಲ್ಲಿ ಸಮಾನ ಮನಸ್ಕರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಮಹಿಳೆಯರಿಗೆ ನೆಟ್​​ವರ್ಕ್​ ಕಲ್ಪಿಸಲಾಗಿದೆ. ಜೊತೆಗೆ, ಟ್ರೆಂಡಿಂಗ್ ಫ್ಯಾಶನ್ ಮತ್ತು ಲೈಫ್​ಸ್ಟೈಲ್, ಪ್ರೇರಣಾದಾಯಕ ಕಥೆಗಳು, ಮಹಿಳಾ ಸಂಬಂಧಿ ಬೆಳವಣಿಗೆಗಳ ಬಗೆಗಿನ ಸುದ್ದಿಗಳು ಎಲ್ಲವೂ ಲಭ್ಯ. ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ಕೌಶಲ್ಯಾಭಿವೃದ್ಧಿಗೆ ವಿವಿಧ ತರಗತಿಗಳು, ನೂತನ ಉದ್ಯೋಗಾವಕಾಶಗಳು ಮಾಹಿತಿ ಲಭ್ಯವಿದ್ದರೆ, ಗೃಹಿಣಿಯರಿಗೆ ಮನೆ ನಿರ್ವಹಣೆ, ಹೊಸ ಹೊಸ ರೆಸಿಪಿ ಮುಂತಾದಂತೆ ಮಾಹಿತಿ ಇರಲಿದೆ.

ಇನ್ನು ಫಿಟ್​​ನೆಸ್​ ಬಗ್ಗೆ ಆಸಕ್ತಿ ಇರುವ ಮಹಿಳೆಯರಿಗೆ ಪರ್ಸನಲೈಸ್ಡ್​ ಟ್ರ್ಯಾಕರ್​​ಗಳು, ಫಿಟ್​ನೆಸ್​ ಮಾಡೆಲ್ ಮತ್ತು ಶೆಡ್ಯೂಲ್​ಗಳು, ಡಯಟ್​ ಪ್ಲಾನ್ ಮುಂತಾದ ಸೌಲಭ್ಯ ಇದರಲ್ಲಿದೆ. ಜೊತೆಗೆ ಸದಸ್ಯರಿಗೆ ಆರೋಗ್ಯದ ವಿಚಾರಗಳನ್ನು ತಜ್ಞರೊಂದಿಗೆ ಚರ್ಚಿಸಲು ಉಚಿತ ಅವಕಾಶವೂ ಉಂಟು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net