ಬಾಳೆಹೊನ್ನೂರಿನಲ್ಲಿ ಧಾರಾಕಾರ ಮಳೆ

18bhr 1 rain
ಬಾಳೆಹೊನ್ನೂರಿನ ವಿವೇಕನಗರದಲ್ಲಿ ಸುರಿದ ಮಳೆಗೆ ಭತ್ತದ ಗದ್ದೆ ಜಲಾವೃತಗೊಂಡಿರುವುದು.
Published on

ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ಆರಂಭಗೊಂಡ ಮಳೆ ಒಂದು ಗಂಟೆಗೂ ಅಧಿಕ ಕಾಲ ಸುರಿಯಿತು. ಭಾರಿ ಮಳೆಗೆ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಶಿವನಗರದ ಬಳಿ ಮುಖ್ಯರಸ್ತೆಯಲ್ಲಿ ಹಳ್ಳದಂತೆ ನೀರು ಹರಿದ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು. ಶಿವನಗರದಲ್ಲಿ ಭತ್ತದ ನಾಟಿಗೆ ಸಿದ್ಧಗೊಳಿಸಿದ್ದ ಗದ್ದೆಗಳು ಹಳ್ಳದಂತಾಗಿದ್ದವು. ಪಟ್ಟಣದ ವಿವೇಕನಗರದಲ್ಲೂ ನಾಟಿ ಮಾಡಿದ್ದ ಗದ್ದೆ ಸಂಪೂರ್ಣವಾಗಿ ನೀರಿನಿಂದ ಜಲಾವೃತಗೊಂಡಿತ್ತು. ಅಕ್ಕಪಕ್ಕದ ತೋಟಗಳಿಗೂ ಮಳೆಯಿಂದ ನೀರು ನುಗ್ಗಿತ್ತು. ಬಾಳೆಹೊನ್ನೂರು, ಇಟ್ಟಿಗೆ, ಶಿವನಗರ, ಸೀಗೋಡು, ರಂಭಾಪುರಿ ಮಠ, ಮೆಣಸುಕೊಡಿಗೆ, ಕುಂಬತ್ತಿ, ತಲವಾನೆ, ಅರಳೀಕೊಪ್ಪ, ಸೀಕೆ, ವಾಟುಕೊಡಿಗೆ, ಮುದುಗುಣಿ, ಮಸೀದಿಕೆರೆ, ಅಕ್ಷರನಗರ ಭಾಗದಲ್ಲೂ ಧಾರಾಕಾರ ಮಳೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net