ಮದ್ದೂರಿನಲ್ಲಿ ತಂಪೆರೆದ ಮಳೆ

04M.D.R.1
ಮದ್ದೂರಿನಲ್ಲಿ ಮಳೆ ಬರುತ್ತಿರುವುದು.
Published on

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ಮಧ್ಯಾಹ್ನ ಸುರಿದ ಮಳೆ ಇಳೆ ಹಾಗೂ ಸಾರ್ವಜನಿಕರಿಗೆ ತಂಪೆರೆಯಿತು.

ಮಧ್ಯಾಹ್ನ 3.20ಕ್ಕೆ ಆರಂಭಗೊಂಡ ಮಳೆ 4 ಗಂಟೆಯವರೆಗೆ ಸುರಿಯಿತು. ಮಳೆ ಇಲ್ಲದೆ ಆಕಾಶದತ್ತ ಮುಖ ಮಾಡಿದ್ದ ರೈತರಿಗೆ ಮಳೆ ರಾಯ ಕೊನೆಗೂ ಕೃಪೆ ತೋರಿದ್ದು, ಸಂತಸ ತಂದಿದೆ. ಮಳೆಯಿಂದ ಸಾರ್ವಜನಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net