ಒಂದು ತಾಸು ಧಾರಾಕಾರ ಮಳೆ

bhr rain
: ಬಾಳೆಹೊನ್ನೂರು ಪಟ್ಟಣದ ಮಾರಿಗುಡಿ ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದು.
Published on

ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಭಾಗಗಳಲ್ಲಿ ಗುರುವಾರ ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿದಿದೆ. ಮಧ್ಯಾಹ್ನ ಮೂರು ಗಂಟೆ ವೇಳೆಗೆ ಗುಡುಗು, ಗಾಳಿ ಸಹಿತ ಆರಂಭಗೊಂಡ ಮಳೆ ಧಾರಾಕಾರವಾಗಿ ಸುರಿಯಿತು. ಕಳೆದ ಎರಡು ದಿನಗಳಿಂದ ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶದ ಕೆಲವೆಡೆ ಸಾಧಾರಣ ಮಳೆ ಆಗುತ್ತಿತ್ತು. ಗುರುವಾರ ಮಧ್ಯಾಹ್ನ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಆರಂಭವಾಯಿತು. ಕಳೆದ ಕೆಲ ದಿನಗಳ ಹಿಂದೆ ಬಂದಿದ್ದ ಮಳೆ ಕಾಫಿ, ಅಡಕೆ ತೋಟಗಳಿಗೆ ತಂಪನ್ನು ನೀಡಿತ್ತು. ಪುನಃ ಅದೇ ರೀತಿಯ ಮಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಗುರುವಾರ ಸುರಿದ ಮಳೆ ಅನುಕೂಲವನ್ನುಂಟು ಮಾಡಿದೆ. ಬಿಸಿಲಿನಿಂದ ಸೊರಗಿ ಹೋಗಿದ್ದ ಕಾಫಿ ಗಿಡ, ಅಡಕೆ ಮರಗಳಿಗೆ ಮಳೆ ಚೇತರಿಕೆ ನೀಡಿದೆ. ಮಳೆಗೆ ಯಾವುದೇ ಅನಾಹುತ ಆಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net