

ಗುಜರಾತ್: ಮುಂದಿನ ದಿನಗಳಲ್ಲಿ ಉತ್ತರಾಖಂಡ (Uttarkhand) ಮತ್ತು ಮಹಾರಾಷ್ಟ್ರದ (Maharashtra) ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ (Weather Forecast) ಮಾಹಿತಿ ನೀಡಿದೆ. ಈ ಮಧ್ಯೆ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಭಾಗಗಳಿಗೂ ಮುಂಗಾರು ಪ್ರವೇಶಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.]
ಹವಾಮಾನ ಇಲಾಖೆಯು ಜುಲೈ 5 ರವರೆಗೆ ಉತ್ತರಾಖಂಡದ ಕೆಲವು ಭಾಗಗಳಿಗೆ ಆರೆಂಜ್ ಅಲರ್ಟ್ (Orange Alert) ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯನ್ನು ಸೂಚಿಸಿದೆ. ಅದರಂತೆಯೇ ಜುಲೈ 4 ರವರೆಗೆ ಗೋವಾದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಈ ವರ್ಷ ಮುಂಗಾರು ಪ್ರವೇಶ ವಿಳಂಬವಾಗಿದ್ದರೂ, ಅದರ ಆರಂಭ ಸದ್ಯ ದೇಶದ ಹಲವು ಭಾಗಗಳಲ್ಲಿ ಜಲಾವೃತ ಮತ್ತ ಪ್ರವಾಹದ ಪರಿಸ್ಥಿತಿಗೆ ಕಾರಣವಾಗುತ್ತಿದೆ.
ಸದ್ಯ ಸತತ ಮಳೆಯಿಂದ ಗುಜರಾತ್ ತತ್ತರಿಸಿದ್ದು, ರಾಜ್ಯದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪತ್ತು ಪ್ರತಿಕ್ರಿಯೆ ಪಡೆಗಳ ಹೊರತಾಗಿ, ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಭಾರತೀಯ ವಾಯುಪಡೆಗೆ ಒತ್ತಾಯಿಸಲಾಗಿದೆ,(ಏಜೆನ್ಸೀಸ್).