More

    ರೇಡಿಯೋ ಚಾನೆಲ್​ಗಳ ವಿಲೀನ ಬೇಡ; ಹಾಲಿ ನಿರೂಪಕರು ನಿರುದ್ಯೋಗಿಗಳಾಗುತ್ತಾರೆ.. ಈಗ ಇರುವ ರೀತಿಯಲ್ಲಿಯೇ ನಡೆಸಲು ಅನುಮತಿ ಕೋರಿ ಸಿಎಂಗೆ ಪತ್ರ

    ಬೆಂಗಳೂರು: 101.3 ಎಫ್.ಎಂ. ರೇನ್ ಬೋ ಕನ್ನಡ ಕಾಮನಬಿಲ್ಲು ಅನ್ನು ಬೆಂಗಳೂರಿನ ಆಕಾಶವಾಣಿ ಜತೆಗೆ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಈ ವಿಚಾರದ ಕುರಿತಾಗಿ ಈಗಾಗಲೇ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ.

    ಹೀಗೆ ವಿಲೀನ ಗೊಳಿಸುವುದರಿಂದ ಹಾಲಿ ನಿರೂಪಕರು ನಿರುದ್ಯೋಗಿಗಳಾಗುತ್ತಾರೆ. ಈ ವಿಚಾರವನ್ನು ಕೈ ಬಿಡಿ. ವಾಹಿನಿಯನ್ನು ಈಗಿರುವ ರೀತಿಯಲ್ಲಿಯೇ ಕಾರ್ಯವಹಿಸುವಂತೆ ಆದೇಶಿಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಕಾಶವಾಣಿ ಎಫ್.ಎಂ. ರೇನ್ ಬೋ ಕನ್ನಡ ಕಾಮನಬಿಲ್ಲು, ರಾಜಭವನ ರಸ್ತೆ, ಬೆಂಗಳೂರು, ಇವರು ಪತ್ರ ಬರೆದು ಮನವಿ ಮಾಡಿದ್ದಾರೆ.

     ಇದನ್ನೂ ಓದಿ:  VIDEO| ಮೊಸಳೆಯನ್ನು ಮದುವೆಯಾದ ಮೇಯರ್​​; ಈ ವಿವಾಹದ ಹಿಂದೆ ಇದೆ ಆ ಕಾರಣ….

    ಪತ್ರದಲ್ಲಿ ಏನಿದೆ?: ಸದರಿ ರೇನ್ ಬೋ ಕನ್ನಡ ಕಾಮನಬಿಲ್ಲು 101.3ನ್ನು ಬೆಂಗಳೂರಿನ ಆಕಾಶವಾಣಿ ಮುಖ್ಯವಾಹಿನಿಗೆ ವಿಲೀನಗೊಳಿಸುತ್ತಿರುವುದರಿ೦ದ ಕಾರ್ಯಕ್ರಮಗಳು 18 ಗಂಟೆಯಿಂದ 5 ಗಂಟೆಗೆ ಇಳಿಸಿ ಹಾಗೂ ಪ್ರತಿದಿನ 3 ಜನ ನಿರೂಪಕ ಕನ್ನಡ ಆರ್.ಜೆ.ಗಳಿಂದ 1 ಆರ್.ಜೆ.ಗಳಿಗೆ ಇಳಿಸಿ, ಆರ್.ಜೆ. ಗಳಿಗೆ ಕೆಲಸವಿಲ್ಲದೆ ನಿರುದ್ಯೋಗ ವಂಚಿತರಾಗಿದ್ದು, ಹಾಗೂ ಸದರಿ ವಿಲೀನದಿಂದ ಮುಕ್ತಗೊಳಿಸಿ ಈಗಿರುವ ರೀತಿಯಲ್ಲಿಯೇ ಆಕಾಶವಾಣಿ ಎಫ್.ಎಂ. ರೇನ್ ಬೋ ಕನ್ನಡ ಕಾಮನಬಿಲ್ಲು, ಕಾರ್ಯಕ್ರಮ ನಡೆಸಲು ಅನುಮತಿ ಕೊಡಿಸಿಕೊಡುವಂತೆ ಕೋರಲಾಗಿದೆ.

    ಇದನ್ನೂ ಓದಿ:  ಗ್ರಾಹಕರ ಕೈಸುಡುತ್ತಿದೆ ಟೊಮ್ಯಾಟೊ ದರ; ಆಂಧ್ರ ಸರ್ಕಾರದಿಂದ ಕಡಿಮೆ ಬೆಲೆಗೆ ಮಾರಾಟ

    ಅದುದರಿಂದ ಈ ಮನವಿಯನ್ನು ಪರಿಗಣಿಸಿ ಕನ್ನಡ ಆರ್.ಜೆ. ಗಳ ಹಾಗೂ ಕರ್ನಾಟಕದ ಕೇಳುಗರ ಹಿತದೃಷ್ಠಿಯಿಂದ ಆಕಾಶವಾಣಿ ಎಫ್.ಎಂ. ರೇನ್ ಬೋ ಕನ್ನಡ ಕಾಮನಬಿಲ್ಲು ಕಾರ್ಯಕ್ರಮಗಳನ್ನು ಈಗಿರುವ ರೀತಿಯಲ್ಲಿಯೇ ಉಳಿಸಿಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸುವಂತೆ ಮಾನ್ಯ ಮುಖ್ಯಮಂತ್ರಿಯವರಲ್ಲಿ ಕೋರಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

    ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ ಶೀರ್ಷಿಕೆಯಡಿ ಹೋರಾಟ ಮಾಡುತ್ತೇವೆ: ಡಾ.ಸಿ.ಎನ್.ಅಶ್ವತ್ಥ ನಾರಾಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts