More

    VIDEO| ಮೊಸಳೆಯನ್ನು ಮದುವೆಯಾದ ಮೇಯರ್​​; ಈ ವಿವಾಹದ ಹಿಂದೆ ಇದೆ ಆ ಕಾರಣ….

    ಮೆಕ್ಸಿಕೋ: ದಕ್ಷಿಣ ಮೆಕ್ಸಿಕೋದ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಅಲಿಸಿಯಾ ಆಡ್ರಿಯಾನಾ ಎಂಬ ಹೆಣ್ಣು ಮೊಸಳೆಯನ್ನು ವಿವಾಹವಾದರು. ಈ ವಿಚಿತ್ರವಾದ ಮದುವೆಯ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

    VIDEO| ಮೊಸಳೆಯನ್ನು ಮದುವೆಯಾದ ಮೇಯರ್​​; ಈ ವಿವಾಹದ ಹಿಂದೆ ಇದೆ ಆ ಕಾರಣ….

    ದಕ್ಷಿಣ ಮೆಕ್ಸಿಕೋದಲ್ಲಿರುವ ಸ್ಯಾನ್ ಪೆಡ್ರೊ ಹುವಾಮೆಲುಲಾ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ, ಅದೃಷ್ಟವನ್ನು ತರುತ್ತದೆ ಎಂದು ನಂಬಲಾದ ಸಾಂಪ್ರದಾಯಿಕ ಸಮಾರಂಭದಲ್ಲಿ ಹೆಣ್ಣು ಮೊಸಳೆಯನ್ನು ವಿವಾಹವಾದರು.

    ಇದನ್ನೂ ಓದಿ:  ಅಪರೂಪದ ಕಾಯಿಲೆಯಿಂದ 30ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಪೊಗರು ಚಿತ್ರದ ನಟ

    ಚೊಂಟಾಲ್ ಮತ್ತು ಹುವಾವೆ ಸ್ಥಳೀಯ ಗುಂಪುಗಳು ಶಾಂತಿಯನ್ನು ಸ್ಮರಿಸಲು 230 ವರ್ಷಗಳಿಂದ ಈ ವಿವಾಹ ಆಚರಣೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ಈ ವಿವಾಹ ಸಮಾರಂಭವು ಸಮುದಾಯಗಳನ್ನು ಭೂಮಿಯೊಂದಿಗೆ ಸಂಪರ್ಕಿಸಲು ಮತ್ತು ಮಳೆ, ಬೆಳೆ ಮೊಳಕೆಯೊಡೆಯಲು ಮತ್ತು ಸಾಮರಸ್ಯದಿಂದ ಜೀವನ ನಡೆಸಲು ಆಶೀರ್ವಾದವನ್ನು ಪಡೆಯಲು ಈ ಆಚರಣೆ ಮಾಡಲಾಗುತ್ತದೆ. ಮೇಯರ್ ಅವರು ಮೊಸಳೆಯನ್ನು ಮದುವೆಯಾದ್ರೆ ಮಧುಮಗಳು ಶಾಂತಿ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುತ್ತಾಳೆ ಎನ್ನುವುದು ಇವರ ನಂಬಿಕೆ.

    ಈ ಸಮಾರಂಭದಲ್ಲಿ ಮೊಸಳೆಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಆ ಮೊಸಳೆಗೆ ಬಾಯಿಯನ್ನು ಕಟ್ಟಿ ಹಾಕಲಾಗಿತ್ತು. ಈ ಮೊಸಳೆ ಮದುವೆ ಮುನುಷ್ಯರ ಮದುವೆಗಿಂತ ಅದ್ಧೂರಿಯಾಗಿ ನಡೆಯಿತು. ಮೇಯರ್ ವಧು ಆಗಿರುವ ಮೊಸಳೆಯನ್ನು ಕೈಯಲ್ಲಿ ಹಿಡಿದು ಜತೆ ನೃತ್ಯ ಮಾಡುತ್ತಾರೆ. ಮೇಯರ್ ಮೊಸಳೆ ಮೂತಿಗೆ ಮುತ್ತು ಚುಂಬಿಸುತ್ತಾರೆ ಸಮಾರಂಭವು ಮುಕ್ತಾಯವಾಗುತ್ತದೆ. ಈ ವಿಡಿಯೋ ವೈರಲ್​​​ ಆಗುತ್ತಿದ್ದಂತೆ ನೆಟ್ಟಿಗರು ಇದೆಂತಾ ವಿಚಿತ್ರ ಆಚರಣೆ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

    ಗ್ರಾಹಕರ ಕೈಸುಡುತ್ತಿದೆ ಟೊಮ್ಯಾಟೊ ದರ; ಆಂಧ್ರ ಸರ್ಕಾರದಿಂದ ಕಡಿಮೆ ಬೆಲೆಗೆ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts