

ಜರ್ಮನಿ: ದ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಅಬ್ಬರಿಸಿದ್ದ ಜೋ ಲಿಂಡ್ನರ್ ಅಕಾಲಿಕ ಮರಣವನ್ನು ಹೊಂದಿದ್ದಾರೆ.
ಜರ್ಮನಿಯ ಫಿಟ್‌ನೆಸ್ ಪ್ರಭಾವಿ ಜೋಸ್ತೆಟಿಕ್ಸ್ ಎಂದೇ ಜನಪ್ರಿಯರಾದ ಲಿಂಡ್ನರ್(30) ಸಾವಿನ ಸುದ್ದಿಯನ್ನು ಗೆಳತಿ ಅವರ ಗೆಳತಿ ನಿಚಾ ಖಚಿತಪಡಿಸಿದ್ದು, ಆ್ಯನ್ಯುರಿಸಮ್ ಎಂಬ ರಕ್ತನಾಳದ ಕಾಯಿಲೆಯಿಂದಾಗಿ ಮೂರು ದಿನಗಳ ಹಿಂದ ಕತ್ತಿನ ಭಾಗದಲ್ಲಿ ನೋವು ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಲಿಂಡ್ನರ್ ನಮ್ಮನ್ನು ಅಗಲಿದ್ದಾರೆ ಎಂದು ಆಕೆ ತಿಳಿಸಿದ್ದಾಳೆ.
ಇದನ್ನೂ ಓದಿ: ಫೋನ್ ಪೇ ಮೂಲಕ 66 ಸಾವಿರ ರೂ. ಲಂಚ ಪಡೆದು ಕೆಲಸ ಮಾಡಿಕೊಡದ ಗ್ರಾಮ ಲೆಕ್ಕಿಗ: ಸಂತ್ರಸ್ತೆ ಅಳಲು
ಇನ್ಸ್ಟಾಗ್ರಾಮ್ನಲ್ಲಿ 8.5 ಮಿಲಿಯನ್ ಅನುಯಾಯಿಗಳು ಮತ್ತು YouTube ನಲ್ಲಿ 940k ಚಂದಾದಾರನ್ನು ಹೊಂದಿದ್ದ ಜೋ ಲಿಂಡ್ನರ್, ತಮ್ಮ ವಿಡಿಯೋಗಳಲ್ಲಿ ಫಿಟ್‌ನೆಸ್ ಕುರಿತು ಸಲಹೆ ಮತ್ತು ತಂತ್ರಗಳನ್ನು ನಿಯಮಿತವಾಗಿ ಹಂಚಿಕೊಳ್ಳುವುದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು ವ್ಯಕ್ತಿಯಾಗಿದ್ದರು.
ಅನೆರೈಸ್ಮ್ ಎನ್ನುವುದು ರಕ್ತನಾಳದಲ್ಲಿನ ಉಬ್ಬುವಿಕೆಯಾಗಿದ್ದು, ಇದು ರಕ್ತನಾಳದ ಗೋಡೆಯಲ್ಲಿನ ದೌರ್ಬಲ್ಯದಿಂದ ಉಂಟಾಗುವುದರ ಜತೆಗೆ ಕವಲೊಡೆಯುವ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅಲ್ಲದೇ, ಈ ರೋಗ ಒಂದು ಅಪರೂಪದ ಸ್ಥಿತಿಯಾಗಿದ್ದು ಇದು ಪ್ರಾಥಮಿಕವಾಗಿ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ.(ಏಜೆನ್ಸೀಸ್)