ಫೋನ್​ ಪೇ ಮೂಲಕ 66 ಸಾವಿರ ರೂ. ಲಂಚ ಪಡೆದು ಕೆಲಸ ಮಾಡಿಕೊಡದ ಗ್ರಾಮ ಲೆಕ್ಕಿಗ: ಸಂತ್ರಸ್ತೆ ಅಳಲು

village accountant
Published on

ಮಂಡ್ಯ: ಆನ್​ಲೈನ್​ ಮೂಲಕ ಲಂಚ ಸ್ವೀಕರಿಸಿದ್ದಲ್ಲದೆ, ಕೆಲಸ ಮಾಡಿಕೊಡದೇ ಸತಾಯಿಸುತ್ತಿರುವ ಗ್ರಾಮ ಲೆಕ್ಕಿಗನ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿರುವ ಘಟನೆ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ.

ಇ-ಸ್ವತ್ತು ಮಾಡಿಕೊಡಲು ಫೋನ್ ಪೇ ಮೂಲಕ ಲಂಚ ಸ್ವೀಕರಿಸಿರುವ ಆರೋಪ ನಾಗಮಂಗಲ ತಾಲೂಕಿನ ಲಾಳನಕೆರೆ ವೃತ್ತದ ಗ್ರಾಮಲೆಕ್ಕಿಗ ನಿಂಗಪ್ಪ ಸುರಪುರ ವಿರುದ್ಧ ಕೇಳಿಬಂದಿದೆ. ಇದೀಗ ಸಂತ್ರಸ್ತೆ ದಾಖಲೆ ಸಮೇತ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಮೀನಾಕ್ಷಿ ಎಂಬ ಮಹಿಳೆಯಿಂದ 66 ಸಾವಿರ ರೂ. ಲಂಚ ಪಡೆದಿರುವ ಆರೋಪವಿದೆ. ಹಣ ಪಡೆದು ವರ್ಷವಾದರೂ ಖಾತೆ ಮಾಡಿಕೊಡದೆ ಸತಾಯಿಸುತ್ತಿದ್ದಾರಂತೆ. ಇದರಿಂದ ಕಣ್ಣೀರಾಕಿರುವ ಸಂತ್ರಸ್ತೆ, ನಾಗಮಂಗಲ ತಹಸೀಲ್ದಾರ್​ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇತ್ತ ದೂರು ಕೊಡುತ್ತಿದ್ದಂತೆ ಲಂಚಬಾಕ ಗ್ರಾಮ ಲೆಕ್ಕಿಗ ಕಚೇರಿಗೂ ಬರದೇ ಗೈರಾಗುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net