ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಕಾಣಿಸದಷ್ಟು ಮಂಜು: ಪ್ರಪಾತದ ಬಳಿಯೇ ಅಪಘಾತ, ಇನ್ನೊಂದು ಆ್ಯಕ್ಸಿಡೆಂಟ್​ನಲ್ಲಿ ವಾಹನ ಪಲ್ಟಿ!

Accident 2
Published on

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ರಸ್ತೆ ಕಾಣಿಸದಷ್ಟು ದಟ್ಟವಾಗಿ ಮಂಜು ಆವರಿಸಿದ್ದು, ಇದೇ ಕಾರಣಕ್ಕೆ ಎರಡು ಅಪಘಾತಗಳು ಸಂಭವಿಸಿವೆ. ಒಂದು ಆ್ಯಕ್ಸಿಡೆಂಟ್​ನಲ್ಲಿ ವಾಹನ ಪಲ್ಟಿಯಾದರೆ, ಇನ್ನೊಂದು ಅಪಘಾತ ಪ್ರಪಾತದ ಬಳಿಯೇ ಸಂಭವಿಸಿದೆ.

ಸುಮಾರು 19 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿಯಲ್ಲಿ ತುಂತುರು ಮಳೆ ಜೊತೆಗೆ ಮಂಜು ಕೂಡ ಕವಿದಿದೆ. ಹೀಗಾಗಿ ರಸ್ತೆ ಕಾಣಿಸದ್ದರಿಂದ ಸವಾರರು ವಾಹನ ಚಲಾಯಿಸಲು ಪ್ರಯಾಸ ಪಡುವಂತಾಗಿದೆ. ಮೂಡಿಗೆರೆ ತಾಲೂಕಿನ ಬಿದಿರುತಳ ಬಳಿ ತಡೆಗೋಡೆಗೆ ಡಿಕ್ಕಿ ಹೊಡೆದ ಬೊಲೆರೊ ವಾಹನ ಪಲ್ಟಿಯಾಗಿದೆ.

ಇನ್ನೊಂದು ಅಪಘಾತದಲ್ಲಿ ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಬಸ್​-ಕಾರು ಡಿಕ್ಕಿಯಾಗಿದೆ. ಇವೆರಡರ ಡಿಕ್ಕಿಯ ರಭಸಕ್ಕೆ ತಡೆಗೋಡೆ ಕುಸಿದುಬಿದ್ದಿದೆ. ಮಾತ್ರವಲ್ಲ, ಪ್ರಪಾತದ ಬಳಿಯೇ ಈ ಅಪಘಾತ ಸಂಭವಿಸಿದ್ದು, ಭಾರಿ ಅನಾಹುತ ಸ್ವಲ್ಪದರಲ್ಲಿ ತಪ್ಪಿದೆ. ತಕ್ಷಣ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net