VIDEO | ಮೆಟ್ರೋದಲ್ಲಿ ಮಹಿಳೆಯರ ನಡುವೆ ಮಾತಿನ ಜಟಾಪಟಿ; ವಿಡಿಯೋ ಮಾಡಿಕೊಂಡ ಸಹ ಪ್ರಯಾಣಿಕರು!

Untitled design - 2023-08-03T204727.720
Published on

ನವದೆಹಲಿ: ಕಳೆದ ಒಂದೆರೆಡು ತಿಂಗಳಿಂದ ದೆಹಲಿ ಮೆಟ್ರೋ ಇಂಥ ಹಲವಾರು ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದ್ದು, ಮೆಟ್ರೋ ರೈಲಿನೊಳಗೆ ವೈರಲ್​ ಆದ ಘಟನೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆ ದೆಹಲಿ ಮೆಟ್ರೋಗೆ ಸೇರಿವೆ ಎಂದು ವರದಿಗಳು ತಿಳಿಸಿವೆ. ಸದ್ಯ ಈ ಸಾಲಿಗೆ ಇದೀಗ ಮತ್ತೊಂದು ಘಟನೆ ಸೇರ್ಪಡೆಗೊಂಡಿದ್ದು, ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ನಡೆದ ಮಾತಿನ ಸಮರದ ದೃಶ್ಯ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ದೆಹಲಿ ಮೆಟ್ರೋ ರೈಲಿನೊಳಗೆ ಡ್ಯಾನ್ಸ್​, ರೀಲ್ಸ್​ ಮಾಡುವುದು, ಪ್ರೀತಿ ನಿವೇದನೆ ಮಾಡುವುದು, ಕಿತ್ತಾಡುವುದು ಇಂಥ ಅನೇಕ ಘಟನೆಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗುತ್ತಲ್ಲೇ ಇವೆ. ಇದೀಗ ಇದೇ ರೀತಿಯ ಮತ್ತೊಂದು ಘಟನೆ ಸಂಭವಿಸಿದ್ದು, ಸೀಟಿನಲ್ಲಿ ಕುಳಿತುಕೊಳ್ಳಲು ಪಕಕ್ಕೆ ಸರಿಸಿ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಕ್ಕೆ ಕೋಪಗೊಂಡ ಮಹಿಳೆ, ಏಕಾಏಕಿ ತನ್ನ ಸಹ ಮಹಿಳಾ ಪ್ರಯಾಣಿಕರ ವಿರುದ್ಧ ತೀವ್ರ ವಾಗ್ವಾದಕ್ಕಿಳಿದಿದ್ದಾರೆ.

ಶಾಂತವಾಗಿಯೇ ಉತ್ತರಿಸಿದ ಕಪ್ಪು ಬಣ್ಣದ ವಸ್ತ್ರ ಧರಿಸಿದ ಮಹಿಳೆ, "ಈಗ ಏನಾಯಿತು" ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಮಾತು ನಿಲ್ಲಿಸದ ಗುಲಾಬಿ ಬಣ್ಣದ ಉಡುಗೆ ತೊಟ್ಟ ಮಹಿಳೆ, "ನನಗೆ ಹುಚ್ಚು, ನಾನು ಹೀಗೆ ಮಾತನಾಡುವುದು" ಎಂದು ಸುಖಾಸುಮ್ಮನೆ ಕೂಗಾಡಿದ್ದಾರೆ. ಇದನ್ನು ಮತ್ತೊಬ್ಬ ಪ್ರಯಾಣಿಕರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ದೃಶ್ಯ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕಮೆಂಟ್ ಮುಖೇನ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net