ರಸ್ತೆಯಲ್ಲಿ ರೀಲ್ಸ್‌ಗಾಗಿ ಹುಚ್ಚಾಟ ಮಾಡಿದ ಯುವಕನ ಬಂಧನ

ashiq udp
ಬಂಧನಕ್ಕೊಳಗಾದ ಆಶಿಕ್, ತನ್ನ ವಾಹನದ ಜತೆ
Published on

ಉಡುಪಿ: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಯದ್ವಾತದ್ವಾ ಸ್ಕೂಟಿ ಚಲಾಯಿಸಿ ರೀಲ್ಸ್ ಮಾಡಿ ಭೀತಿಯುಂಟುಮಾಡಿದ್ದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಪರ್ಕಳ ನಿವಾಸಿ ಆಶಿಕ್(19) ಬಂಧಿತ ಯುವಕ. ಇಬ್ಬರು ಯುವಕರು ಅಪಾಯಕಾರಿಯಾಗಿ ಹಾಗೂ ಅತಿ ವೇಗದಲ್ಲಿ ಸ್ಕೂಟರ್ ಚಲಾಯಿಸುತ್ತಿರುವ ವಿಡಿಯೋ ಸಾವಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಸಿಟಿವಿ ಆಧಾರದಲ್ಲಿ ಯುವಕನನ್ನು ಬಂಧಿಸಿ, ಸ್ಕೂಟರ್ ಜಪ್ತಿ ಮಾಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net