More

    ಯುನೈಟೆಡ್ ಕಿಂಗ್‌ಡಂನಿಂದ ಉಡುಗೊರೆ ಆಮಿಷ 5.90 ಲಕ್ಷ ರೂ. ವಂಚನೆ

    ಮಂಗಳೂರು: ಯನೈಟೆಡ್ ಕಿಂಗ್‌ಡಂನಿಂದ ಉಡುಗೊರೆ ಕಳುಹಿಸುವುದಾಗಿ ಆಮಿಷವೊಡ್ಡಿ 5.90 ಲಕ್ಷ ರೂ.ಗಳನ್ನು ಪಡೆದು ವಂಚಿಸಿರುವ ಘಟನೆ ನಡೆದಿದೆ.


    ಜು.22ರಂದು ದೂರುದಾರರಿಗೆ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ತನ್ನನ್ನು ಡಾ. ಫ್ರಾಕ್ಲಿನ್ ಪ್ಯಾಟ್ರಿಕ್ ಎಂದು ಪರಿಚಯಿಸಿಕೊಂಡು ತಾನು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವೈದ್ಯನಾಗಿದ್ದೇನೆ ಎಂದು ಹೇಳಿಕೊಂಡಿದ್ದ. ಕೆಲವು ದಿನಗಳ ಅನಂತರ ತನ್ನ ಮಗಳ ಬರ್ತ್‌ಡೇ ಇದ್ದು ಅದರ ಪ್ರಯುಕ್ತ ವಿದೇಶಿ ಕರೆನ್ಸಿ, ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ತಿಳಿಸಿದ.

    ಜು.24ರಂದು ಇನ್ನೋರ್ವ ಅಪರಿಚಿತ ವ್ಯಕ್ತಿ ದೂರುದಾರರಿಗೆ ಕರೆ ಮಾಡಿ ‘ನಿಮಗೆ ಪಾರ್ಸೆಲ್ ಬಂದಿದ್ದು ಅದು ಈಗ ದಿಲ್ಲಿ ತಲುಪಿದೆ. ಅದರ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕು’ ಎಂದು ಹೇಳಿದ್ದ. ಅದನ್ನು ನಂಬಿದ ದೂರುದಾರರು ತನ್ನ ಖಾತೆಯಿಂದ 40,000 ರೂ.ಗಳನ್ನು ಪ್ರೊಸೆಸಿಂಗ್ ಶುಲ್ಕವೆಂದು ಗೂಗಲ್‌ಪೇ ಸಂಖ್ಯೆಗೆ ಪಾವತಿಸಿದ್ದಾರೆ. ಅನಂತರದ ದಿನಗಳಲ್ಲಿ ಅಪರಿಚಿತ ವ್ಯಕ್ತಿ ಕರೆ ಮಾಡಿ ವಿವಿಧ ಕಾರಣಗಳನ್ನು ತಿಳಿಸಿ ಜು.31ರವರೆಗೆ ಹಂತ ಹಂತವಾಗಿ 5.90 ಲಕ್ಷ ರೂ.ಗಳನ್ನು ದೂರುದಾರರ ಖಾತೆಯಿಂದ ಆತನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಮಂಗಳೂರು ಸೆನ್ ಪೊಲೀಸರಿಗೆ ದೂರು ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts