ಭಾರೀ ಮಳೆಗೆ ಜಲಾವೃತಗೊಂಡ ಹೆದ್ದಾರಿ; ಮೀನು ಹಿಡಿಯಲು ಸ್ಥಳೀಯರ ಹರಸಾಹಸ!

Untitled design - 2023-08-03T200334.709
Published on

ಒಡಿಶಾ: ಒಡಿಶಾದ ಬೌಧ್‌ನಲ್ಲಿ ಭಾರೀ ಮಳೆಗೆ ನಗರ ಪ್ರದೇಶಗಳು ತತ್ತರಿಸಿದ್ದು, ಹೆದ್ದಾರಿಗಳು ಜಲಾವೃತಗೊಂಡಿದೆ. ಈ ವೇಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ 57 ರಲ್ಲಿ ಸ್ಥಳೀಯ ನಿವಾಸಿಗಳು ಮೀನು ಹಿಡಿಯುವ ಕೆಲಸದಲ್ಲಿ ನಿರತರಾದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ನಿರಂತರ ಸುರಿಯುತ್ತಿರುವ ಮಳೆಯಿಂದ ಒಡಿಶಾದ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ದೇಶದ ಹಲವು ರಾಜ್ಯಗಳಲ್ಲಿ ಇದೀಗ ವ್ಯಾಪಕ ಮಳೆಯಾಗುತ್ತಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆ, ಹೆದ್ದಾರಿಗಳು ಭಾರೀ ಮಳೆಗೆ ಉಕ್ಕಿ ಹರಿಯುತ್ತಿದ್ದು, ನಗರದ ನಿವಾಸಿಗಳು ಇದೀಗ ಮೀನು ಹಿಡಿಯುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.

ಮೀನುಗಾರಿಕೆ ನಡೆಸುವಲ್ಲಿ ನಾ ಮುಂದು ತಾ ಮುಂದು ಎಂದು ಸ್ಥಳೀಯರು ಪೈಪೋಟಿ ನಡೆಸುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net