More

    ಹೈಕೋರ್ಟ್ ತೀರ್ಪು ಉಲ್ಲಂಘಿಸಿ ಆನೆಗೊಂದಿ ಭಾಗದ ರೆಸಾರ್ಟ್‌ಗಳಲ್ಲಿ ರಾತ್ರಿ ವಹಿವಾಟು!

    ಗಂಗಾವತಿ: ಹೈಕೋರ್ಟ್ ತೀರ್ಪು ಉಲ್ಲಂಸಿ ತೆರೆಮರೆಯಲ್ಲಿ ನಡೆಯುತ್ತಿದ್ದ ತಾಲೂಕಿನ ಆನೆಗೊಂದಿ ಭಾಗದ ರೆಸಾರ್ಟ್‌ಗಳ ಮೇಲೆ ಕಂದಾಯ ಅಧಿಕಾರಿಗಳ ತಂಡ ಭೇಟಿ ನೀಡಿ ಗುರುವಾರ ಮಾಹಿತಿ ಪಡೆದುಕೊಂಡಿತು.

    ಹಂಪಿ ಪ್ರಾಧಿಕಾರ ವ್ಯಾಪ್ತಿಯ ಆನೆಗೊಂದಿ, ಸಣಾಪುರ, ಜಂಗ್ಲಿ, ಚಿಕ್ಕರಾಂಪುರ, ಹನುಮನಹಳ್ಳಿ ಬಳಿಯ 30 ಅಕ್ರಮ ರೆಸಾರ್ಟ್‌ಗಳನ್ನು ಹೈಕೋಟ್ ತೀರ್ಪಿನಂತೆ ಜುಲೈನಲ್ಲಿ ನೆಲಸಮಗೊಳಿಸಲಾಗಿತ್ತು. ತಡೆಯಾಜ್ಞೆ ತಂದಿದ್ದ 15 ರೆಸಾರ್ಟ್‌ಗಳಿಗೆ ಬೀಗ ಹಾಕಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

    ತಡೆಯಾಜ್ಞೆ ವಿಚಾರಣೆ ಮುಂದೂಡಿದ್ದರಿಂದ ಬೀಗ ಬಿದ್ದಿರುವ ರೆಸಾರ್ಟ್‌ಗಳಲ್ಲಿ ಯಾವುದೇ ವಹಿವಾಟು ನಡೆಸಲು ಅವಕಾಶವಿರಲಿಲ್ಲ. ರಾತ್ರಿ ವೇಳೆ ಕದ್ದುಮುಚ್ಚಿ ರೆಸಾರ್ಟ್‌ಗಳು ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ರಾತ್ರಿ ಸಮಯದಲ್ಲಿ ನಡೆಯುತ್ತಿದ್ದ ಕೆಲ ರೆಸಾರ್ಟ್‌ಗಳ ೆಟೋಗಳು ವೈರಲ್ ಆಗಿದ್ದವು. ಇನ್ನೂ ಕೆಲವರು ವಹಿವಾಟು ನಡೆಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರು.

    ಮಾಹಿತಿ ಪಡೆದ ಗ್ರಾಮಲೆಕ್ಕಾಧಿಕಾರಿ ಡಿ.ಮಂಜುನಾಥ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ರೆಸಾರ್ಟ್‌ಗಳಿಗೆ ತೆರಳಿ ಮಾಹಿತಿ ಪಡೆದುಕೊಂಡರಲ್ಲದೇ, ಯಾವುದೇ ರೀತಿಯಲ್ಲಿ ವಹಿವಾಟು ನಡೆಸದಂತೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

    ಈ ಬಗ್ಗೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಹೈಕೋರ್ಟ್ ತೀರ್ಪಿನಂತೆ ತಡೆಯಾಜ್ಞೆ ತಂದ ರೆಸಾರ್ಟ್‌ಗಳಿಗೆ ಬೀಗ ಮುದ್ರೆ ಹಾಕಿದ್ದು, ತೀರ್ಪು ಬರುವವರೆಗೆ ಯಾವುದೇ ವಹಿವಾಟು ನಡೆಸಲು ಬರಲ್ಲ. ಈಗಾಗಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

    ಯಾಲಯ ಆದೇಶ ಉಲ್ಲಂಸಿ ವಹಿವಾಟು ನಡೆಸುವ ಬಗ್ಗೆ ಮಾಹಿತಿ ಸಿಕ್ಕರೆ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts