More

    ಮೆಗಾ ಸ್ಟಾರ್​ ಚಿತ್ರದ ಪ್ರಿ-ರಿಲೀಸ್​ ಈವೆಂಟ್​ಗೆ ಫಿಕ್ಸ್​ ಆಯ್ತು ಸ್ಥಳ, ಸಮಯ

    ಆಂಧ್ರಪ್ರದೇಶ: ಟಾಲಿವುಡ್​ನ ಮೆಗಾ ಸ್ಟಾರ್​ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ‘ಭೋಲಾ ಶಂಕರ್’ ಚಿತ್ರದ ಪ್ರಿ-ರಿಲೀಸ್​ ಕಾರ್ಯಕ್ರಮದ ವೇಳೆ ಮತ್ತು ಸ್ಥಳದ ಬಗ್ಗೆ ಇದೀಗ ಹೊಸ ಮಾಹಿತಿ ದೊರಕಿದೆ.

    ಇದನ್ನೂ ಓದಿ: ರೋಣ ತಾಲೂಕು ಪತ್ತಿನ ಸಹಕಾರಿಗೆ ರಾಜಣ್ಣ ಹೂಲಿ ಅಧ್ಯಕ್ಷ

    ಮೆಹರ್ ರಮೇಶ್ ನಿರ್ದೇಶಿಸಿದ ಬಿಗ್​ ಬಜೆಟ್​ ‘ಭೋಲಾ ಶಂಕರ್’ ಚಿತ್ರದಲ್ಲಿ ತಮನ್ನಾ ಭಾಟಿಯಾ ಮತ್ತು ಕೀರ್ತಿ ಸುರೇಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಆಗಸ್ಟ್ 11, 2023 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಮಧ್ಯೆ ಅಭಿಮಾನಿಗಳನ್ನು ಮನರಂಜಿಸಲು ಪ್ರಿ-ರಿಲೀಸ್​ ಈವೆಂಟ್​ ಅನ್ನು ಆಯೋಜಿಸಲಾಗಿದೆ.

    ಚಿತ್ರದ ತಯಾರಕರು ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಿಸಿದ್ದು, ಭೋಲಾ ಶಂಕರ್ ಚಿತ್ರದ ಪ್ರಿ-ರಿಲೀಸ್​ ಈವೆಂಟ್​ ಇದೇ ಆಗಸ್ಟ್ 6, 2023 ರಂದು ಹೈದರಾಬಾದ್​ನ ಶಿಲ್ಪಕಲಾ ವೇದಿಕೆಯಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ ಎಂದು ತಿಳಿಸಿದೆ. ಸದ್ಯ ಈ ಸಂಗತಿ ಮೆಗಾ ಸ್ಟಾರ್​ ಅಭಿಮಾನಿಗಳಿಗೆ ಸಂತಸ ನೀಡಿದ್ದು, ಚಿತ್ರದ ಮೇಲೆ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

    ಇದನ್ನೂ ಓದಿ: VIDEO | ಅಂಗಡಿಯಲ್ಲಿ ಲೂಟಿ ಮಾಡಲು ಯತ್ನಿಸಿದ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ!; ದೃಶ್ಯ ಕಂಡ ನೆಟ್ಟಿಗರು ಶಾಕ್​

    ಚಿತ್ರದಲ್ಲಿ ಕೀರ್ತಿ ಸುರೇಶ್, ಸುಶಾಂತ್, ರಘು ಬಾಬು, ಮುರಳಿ ಶರ್ಮಾ, ವೆನ್ನೆಲ ಕಿಶೋರ್, ರವಿಶಂಕರ್, ತುಳಸಿ, ಶ್ರೀ ಮುಖಿ, ಸುರೇಖಾ ವಾಣಿ, ಹೈಪರ್ ಆದಿ, ಹರ್ಷ ಚೆಮುಡು ಸೇರಿದಂತೆ ದೊಡ್ಡ ತಾರಗಣವಿದೆ,(ಏಜೆನ್ಸೀಸ್).

    ‘ಟೋಬಿ’ ಟ್ರೇಲರ್​ಗೆ ಕ್ಷಣಗಣನೆ ಆರಂಭ; ರಿಲೀಸ್​ ಮಾಡಲು ಯಾರೆಲ್ಲಾ ಆಗಮಿಸಲಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts