VIDEO | ಅಂಗಡಿಯಲ್ಲಿ ಲೂಟಿ ಮಾಡಲು ಯತ್ನಿಸಿದ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ!; ದೃಶ್ಯ ಕಂಡ ನೆಟ್ಟಿಗರು ಶಾಕ್​

Untitled design - 2023-08-03T184305.619
Published on

ಅಮೆರಿಕಾ: ಇತ್ತೀಚೆಗೆ ಅಮೆರಿಕಾದ ಹಲವು ನಗರ ಪ್ರದೇಶಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಅಂಗಡಿ ಮಾಲೀಕರು ತೀವ್ರ ಕಟ್ಟೆಚ್ಚೆರ ವಹಿಸಿದ್ದಾರೆ. ಈ ಮಧ್ಯೆ ಅಂಗಡಿಯೊಳಗೆ ಬಂದ ದರೋಡೆಕೋರ ತನ್ನ ಕೈಚಳಕ ತೋರಿಸಲು ಯತ್ನಿಸಿದ್ದಕ್ಕೆ, ಆತನಿಗೆ ಸ್ಥಳದಲ್ಲಿದ್ದ ವ್ಯಕ್ತಿ ಬಡಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಕ್ಯಾಲಿಫೋರ್ನಿಯಾದಲ್ಲಿರುವ ಅಂಗಡಿಗೆ ನುಗ್ಗಿದ ಕಳ್ಳನು ದೊಡ್ಡ ಬಾಕ್ಸ್​ನಲ್ಲಿ ಹಲವಾರು ಸಾಮಾಗ್ರಿಗಳನ್ನು ತುಂಬಿಸಿಕೊಳ್ಳುತ್ತಿದ್ದ, ಈ ವೇಳೆ ಸ್ಟೋರ್​ನಲ್ಲಿದ್ದ ವ್ಯಕ್ತಿಯೊಬ್ಬರು ಆತನನ್ನು ತಪ್ಪಿಸಿಕೊಳ್ಳದಂತೆ, ಬಲವಾಗಿ ಹಿಡಿದುಕೊಂಡಿದ್ದಾರೆ. ಇದನ್ನು ನೋಡಿದ ಮತ್ತೊಬ್ಬ ವ್ಯಕ್ತಿ ಓಡಿ ಬಂದು, ದೊಣ್ಣೆಯಿಂದ ಕಳ್ಳನಿಗೆ ಮನಬಂದಂತೆ ಥಳಿಸಿದ್ದಾರೆ.

ಈ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net