ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮತ್ತೆ ಬಿಸಿಲು ಹೆಚ್ಚಳ -Heat intensifies again

ಮುಂಗಾರು ಕ್ಷೀಣದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ ಅಧಿಕವಾಗಿ ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದಾಗಿ ಬಿಸಿಲಿನ ಪ್ರಖರತೆಯಿಂದ ಜನರು ಬಳಲುತ್ತಿದ್ದಾರೆ. ಬೆಂಗಳೂರು ನಗರ,ಬಾಗಲಕೋಟೆ, ಚಿತ್ರದುರ್ಗ,ಕಾರವಾರದಲ್ಲಿ ವಾಡಿಕೆಕ್ಕಿಂತ 5 ಡಿ.ಸೆ.ಉಷ್ಣಾಂಶ ಅಧಿಕವಾಗಿದೆ.
ರಾಜ್ಯದಲ್ಲಿ ಬಿಸಿಲು ಹೆಚ್ಚಳ
ಸುಡು ಬಿಸಿಲು
Published on: 

ಬೆಂಗಳೂರು: (Heat intensifies) ರಾಜ್ಯದಲ್ಲಿ ಮುಂದಿನ 3 ದಿನ ಗುಡುಗು, ಬಿರುಗಾಳಿ ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ಅ.5ರಿಂದ ಅ.7ರವರೆಗೆ ಮತ್ತು ಶಿವಮೊಗ್ಗ, ಮೈಸೂರಿನಲ್ಲಿ ಅ.6ರಿಂದ ಮುಂದಿನ 2 ದಿನ ಬಿರುಸಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೊಡಗು ಅ.5, ಚಾಮರಾಜನಗರ ಅ.6, ಉತ್ತರ ಕನ್ನಡ ಅ.7 ಮತ್ತು ಮಂಡ್ಯ ಅ.8ರಂದು ರಭಸವಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರದಲ್ಲಿ ಮುಂದಿನ 3 ದಿನ ಸಾಧಾರಣ ಮಳೆ ಸುರಿಯಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.

Also Read
ಬರ್ತಿದೆ ವಿಲನ್​ ಗಾಡ್ಜಿಲ್ಲಾ... ಇದು ಯುದ್ಧಕ್ಕಿಂತಲೂ ಭೀಕರ, ಬರದ ಜತೆ ತಟ್ಟಲಿದೆ ಬೆಲೆ ಏರಿಕೆ ಬಿಸಿ, ಡೇಂಜರ್​ ಡಿಸೆಂಬರ್..! Godzilla El Niño
ರಾಜ್ಯದಲ್ಲಿ ಬಿಸಿಲು ಹೆಚ್ಚಳ

ಉಷ್ಣಾಂಶ ಹೆಚ್ಚಳ:

ಮುಂಗಾರು ಕ್ಷೀಣದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ ಅಧಿಕವಾಗಿ ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದಾಗಿ ಬಿಸಿಲಿನ ಪ್ರಖರತೆಯಿಂದ ಜನರು ಬಳಲುತ್ತಿದ್ದಾರೆ. ಬೆಂಗಳೂರು ನಗರ,ಬಾಗಲಕೋಟೆ, ಚಿತ್ರದುರ್ಗ,ಕಾರವಾರದಲ್ಲಿ ವಾಡಿಕೆಕ್ಕಿಂತ 5 ಡಿ.ಸೆ.ಉಷ್ಣಾಂಶ ಅಧಿಕವಾಗಿದೆ. ಉಳಿದ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ 2-3 ಡಿ.ಸೆ. ಹೆಚ್ಚಳವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net