ಹಿರಿಯ ನಾಗರಿಕರ ದಿನಾಚರಣೆ: ಸಿಎಂ-ಸಚಿವರಿಂದ ಶ್ರವಣದೋಷ ನಿವಾರಣಾ ಯಂತ್ರ, ಗಾಲಿ ಕುರ್ಚಿ ವಿತರಣೆ

CM hebbalkar
Published on

ಬೆಂಗಳೂರು: ಹಿರಿಯ ನಾಗರಿಕರ ದಿನವಾದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶ್ರವಣದೋಷ ನಿವಾರಣಾ ಯಂತ್ರ ಮತ್ತು ಗಾಲಿ ಕುರ್ಚಿಗಳನ್ನು ಉಚಿತವಾಗಿ ವಿತರಿಸಿದರು.

ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಮತ್ತು ಲಯನ್ಸ್ ಕುಮಾರಪಾರ್ಕ್ ಟ್ರಸ್ಟ್ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಅವರು ಈ ಉಪಕರಣಗಳನ್ನು ವಿತರಣೆ ಮಾಡಿದರು.

ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಶಿಬಿರಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಉಪಕರಣಗಳನ್ನು ವಿತರಿಸಿದರು. ಅಂಗವಿಕಲರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿ ರಾಜು ಚಂದ್ರಶೇಖರ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net