ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿಗೆ ಶಾಕ್; ಹೆಂಡತಿಯನ್ನು ರಕ್ಷಿಸಲು ಧಾವಿಸಿದ ಗಂಡ; ಕೊನೆಗೆ ಇಬ್ಬರ ಸಾವು!

Electric Shock (1)
Published on

ಬೀದರ್: ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿ ಶಾಕ್​ಗೆ ಒಳಗಾದಾಗ ಆಕೆಯನ್ನು ರಕ್ಷಿಸಲು ಪತಿ ಧಾವಿಸಿದ್ದು, ಕೊನೆಗೆ ಇಬ್ಬರೂ ಸಾವಿಗೀಡಾದ ದುರಂತವೊಂದು ಸಂಭವಿಸಿದೆ. ಬೀದರ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಮನ್ಮಳ್ಳಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಶಿವಾರೆ ಹಾಗೂ ಅವರ ಪತ್ನಿ ಶರಣಮ್ಮ ಸಾವಿಗೀಡಾದವರು. ಮನ್ನಳ್ಳಿ- ಚಿಂತಲಗಿ ಮಧ್ಯೆ ರಸ್ತೆ ಪಕ್ಕ ವಿದ್ಯುತ್ ತಂತಿ ಕಡಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಕಂಬದಲ್ಲಿ ತುಂಡಾದ ತಂತಿ ನೀರಲ್ಲಿ ಬಿದ್ದಿರುವುದು ಶರಣಮ್ಮ ಅವರಿಗೆ ತಿಳಿದಿರಲಿಲ್ಲ. ಅವರು ಎಮ್ಮೆಗೆ ನೀರು ಕುಡಿಸಲು ಹೋಗಿದ್ದಾಗ ವಿದ್ಯುತ್ ಶಾಕ್​ಗೆ ಒಳಗಾಗಿದ್ದಾರೆ. ಅಲ್ಲೇ ಇದ್ದ ಪತಿ ಮಲ್ಲಿಕಾರ್ಜುನ ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಇಬ್ಬರೂ ವಿದ್ಯುತ್​ ಸ್ಪರ್ಶಕ್ಕೀಡಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮನ್ನಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net