

Recipe: ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡಾ ಸಿಹಿ ತಿಂಡಿಗಳನ್ನು ಇಷ್ಟಪಡುತ್ತಾರೆ. ಇನ್ನು ಕೆಲವರಲ್ಲಿ ಸಕ್ಕರೆ ಕಾಯಿಲೆ ಇರುವಂತಹವರು ಸಿಹಿ ಪದಾರ್ಥಗಳ ಮೇಲೆ ಆಸೆ ಇದ್ದರೂ ಸಿಹಿಗಳಿಂದ ದೂರ ಇರಬೇಕಾಗಿರುತ್ತದೆ. ಅಂತಹ ಜನರಿಗಾಗಿಯೇ ಈ ರಾಗಿ ಕೇಕ್ ಖಾದ್ಯವನ್ನು ತಿಳಿಸಲಾಗಿದೆ. ಇದನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಇದ್ದವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅದೇ ರೀತಿ ಈ ಕೇಕನ್ನು ಯಾರು ಬೇಕಾದರೂ ಸೇವಿಸಬಹುದು. ಹಾಗಿದ್ದರೆ ಈಗಲೇ ನಿಮ್ಮ ಮನೆಯಲ್ಲಿ ಟ್ರೈ ಮಾಡಿ...
* 1/2 ಕಪ್ ಬೆಲ್ಲ
* 1/2 ಕಪ್ ಮೊಸರು
* 1/4 ಕಪ್ ಎಣ್ಣೆ
* 1/2 ಕಪ್ ಹಾಲು
* 2 ಕಪ್ ರಾಗಿ ಹಿಟ್ಟು
* 2 ಚಮಚ ಚಾಕೋಲೇಟ್ ಪೌಡರ್
* 1 ಚಮಚ ವೆನಿಲ್ಲಾ ರಸ
* 1/2 ಚಮಚ ಬೇಕಿಂಗ್ ಪೌಡರ್
* ಸ್ವಲ್ಪ ಉಪ್ಪು
ಮೊದಲು ಒಂದು ಕುಕ್ಕರ್ಗೆ ಉಪ್ಪು ಹಾಕಿ ಅದಕ್ಕೆ ವಿಶಿಲ್ ಹಾಕದೆ ಸ್ವಲ್ಪ ಹೊತ್ತು ಬಿಸಿ ಮಾಡಲು ಒಲೆಯ ಮೇಲೆ ಇಡಿ. ನಂತರ ಒಂದು ಕಡಾಯಿಗೆ ಬೆಲ್ಲ, ಮೊಸರು, ಎಣ್ಣೆ, ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ರಾಗಿ ಹಿಟ್ಟು, ಚಾಕೊಲೇಟ್ ಪೌಡರ್, ವೆನಿಲ್ಲಾ ರಸ, ಉಪ್ಪು, ಬೇಕಿಂಗ್ ಪೌಡರ್ ಹಾಕಿ ಗಂಟು ಆಗದಂತೆ ಮಿಶ್ರಣ ಮಾಡಿ, ಇದಕ್ಕೆ ಸ್ವಲ್ಪ ಸ್ವಲ್ಪ ಹಾಲನ್ನು ಬೆರಸಿ ಹದವಾಗಿ ಮಿಶ್ರಣವನ್ನು ತಯಾರಿಸಿಕೊಂಡು ಒಂದು ಪಾತ್ರೆಗೆ ಹಾಕಿ. ನಂತರ ಕುಕ್ಕರ್ ಬಿಸಿಯಾಗಿದಿಯೇ ಎಂದು ಗಮನಿಸಿ ಅದರೊಳಗೆ ಮಿಶ್ರಣ ಇರುವಂತಹ ಪಾತ್ರೆಯನ್ನು ಇಟ್ಟು 40 ನಿಮಿಷ ಬಿಸಿ ಮಾಡಿ. ನಂತರ ಅದನ್ನು ಹೊರತೆಗೆದು ಕೆಳಪದರವನ್ನು ಕತ್ತರಿಸಿ, ಬೇಕಾದಲ್ಲಿ ಯಾವುದಾದರೂ ಚಾಕಲೋಟ್ ಕ್ರೀಮ್ಗಳನ್ನು ಬಳಸಿ ಸೇವಿಸಬಹುದು.( ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ