ಸಂಜೆ ಚಹಾ ಜೊತೆ ಸವಿಯಿರಿ ಆರೋಗ್ಯಕರ ಓಟ್ಸ್​ ವಡೆ, ಈಗಲೇ ಟ್ರೈ ಮಾಡಿ...|Snack

untitled-design-95-689ddd7b2de2f
Published on

Snack: ಗರಿಗರಿಯಾದ ಆರೋಗ್ಯಕರ ಒಟ್ಸ್ ವಡೆ ಒಂದು ಪೌಷ್ಟಿಕ ಮತ್ತು ರುಚಿಕರವಾದ ತಿಂಡಿಯಾಗಿದ್ದು, ಇದನ್ನು ಒಟ್ಸ್ (Oats) ಮತ್ತು ಇತರ ಆರೋಗ್ಯಕರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ದಕ್ಷಿಣ ಭಾರತದ ಸಾಂಪ್ರದಾಯಿಕ ವಡೆಯ ಆರೋಗ್ಯಕರ ರೂಪವಾಗಿದ್ದು, ಕಡಿಮೆ ಎಣ್ಣೆಯಲ್ಲಿ ತಯಾರಿಸಿದರೆ ಕ್ಯಾಲೊರಿ ಕಡಿಮೆಯಿರುತ್ತದೆ ಮತ್ತು ಫೈಬರ್, ಪ್ರೋಟೀನ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಸಂಜೆಯ ಸಮಯದಲ್ಲಿ ಏನಾದರೂ ತಿನ್ನಲು ನಿಮ್ಮ ದೇಹ ಬಯಸುತ್ತಿರುತ್ತದೆ. ಆ ಸಂದರ್ಭದಲ್ಲಿ ಈ ರೀತಿಯ ತಿಂಡಿಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.

ಬೇಕಾಗುವ ಪದಾರ್ಥಗಳು

* 1/2 ಕಪ್​ ಒಟ್ಸ್​

* 1 ಈರುಳ್ಳಿ

* 1 ಕಪ್​ ಕ್ಯಾರೆಟ್​

*  ಕೊತ್ತುಂಬರಿ ಸೊಪ್ಪು

*  1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

*  1/4 ಕಪ್​ ಎಲೆಕೋಸು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಓಟ್ಸ್, ಸಣ್ಣಗೆ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್​, ಎಲೆಕೋಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಕೊತ್ತುಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಅದನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ, ಕೈಯಲ್ಲಿ ತಟ್ಟಿ ರೆಡಿಮಾಡಿಕೊಳ್ಳಿ ನಂತರ ಒಂದು ತವವನ್ನು ಬಿಸಿ ಮಾಡಿ, ಅದರ ಮೇಲೆ ಸಿದ್ದವಾಗಿರುವ ಓಟ್ಸ್​ನ ತುಂಡುಗಳನ್ನು ಬಂಗಾರದ ಬಣ್ಣ ಬರುವವರೆಗೂ ಎರಡೂ ಬದಿ ಹುರಿಯಿರಿ. ನಂತರ ಸ್ವಲ್ಪ ತಣ್ಣಗಾದ ನಂತರ ಸೇವಿಸಿ....(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net