ಪಾರಂಪರಿಕ ಚಿಕಿತ್ಸಾ ಪದ್ಧತಿಯಿಂದ ಆರೋಗ್ಯ

paramparika
ಚಿಕ್ಕಮಗಳೂರಿನ ಮಧುವನ ಬಡಾವಣೆಯ ಲಯನ್ಸ್ ಸೇವಾ ಭವನದಲ್ಲಿ ಆಯೋಜಿಸಿದ್ದ ಪ್ರಾಚೀನ ಪಾರಂಪರಿಕ ಚಿಕಿತ್ಸಾ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು ವೈದ್ಯರೊಂದಿಗೆ.
Published on

ಚಿಕ್ಕಮಗಳೂರು: ಫಲಿತಾಂಶ ಆಧರಿತ ಪ್ರಾಚೀನ ಪರಂಪರೆಯ ವೈದ್ಯ ಪದ್ಧತಿಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಬೆಂಗಳೂರಿನ ನಿತ್ಯ ಸಂಜೀವಿನಿ ಯೋಗ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಲತಾ ಶೇಖರ್ ಹೇಳಿದರು.
ನಗರದ ಮಧುವನ ಬಡಾವಣೆಯ ಲಯನ್ಸ್ ಸೇವಾ ಭವನದಲ್ಲಿ ಬೆಂಗಳೂರಿನ ನಿತ್ಯ ಸಂಜೀವಿನಿ ಯೋಗ ಪ್ರತಿಷ್ಠಾನ ಮತ್ತು ಚಿಕ್ಕಮಗಳೂರಿನ ಲಯನ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ಪ್ರಾಚೀನ ಪಾರಂಪರಿಕ ಚಿಕಿತ್ಸಾ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.
ಚಿಕಿತ್ಸೆ ಎಂದರೆ ಕೇವಲ ಔಷಧ ಪಡೆಯುವುದಕ್ಕೆ ಸೀಮಿತವಲ್ಲ. ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಪ್ರಾಚೀನ ಪಾರಂಪರಿಕ ವೈದ್ಯ ಸಾರದ ಮಾರ್ಗಸೂಚಿ ಸೂಕ್ತ ಎಂದು ಹೇಳಿದರು.
ಹೆಣ್ಣುಮಕ್ಕಳ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳು, ಮಾನಸಿಕ ಒತ್ತಡ, ಖಿನ್ನತೆ, ಬೊಜ್ಜು, ಹೃದಯ ಸಂಬಂಧಿ ಸಮಸ್ಯೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ, ಸೋರಿಯಾಸಿಸ್ ಮುಂತಾದ ಚರ್ಮ ಸಂಬಂಧಿ ತೊಂದರೆಗಳು, ಮೂತ್ರಪಿಂಡದ ಸಮಸ್ಯೆ, ಮೂತ್ರದಲ್ಲಿ ಕಲ್ಲು, ಬೆನ್ನುನೋವು, ಸಂಧಿವಾತ, ವೈರಾಣು ಸೋಂಕು, ಅಲರ್ಜಿ ಸೇರಿದಂತೆ ಮುಂತಾದ ಸಮಸ್ಯೆಗಳಿಗೆ ಪ್ರಾಚೀನ ಪಾರಂಪರಿಕ ಚಿಕಿತ್ಸೆಯಿಂದ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ.ನಾರಾಯಣಸ್ವಾಮಿ, ಲಯನ್ಸ್ ಕ್ಲಬ್ ಕೋ ಆರ್ಡಿನೇಟರ್ ಬಿ.ಎನ್.ವೆಂಕಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net