

ಬೆಂಗಳೂರು: ಅಶಿಸ್ತು ಆರೋಪ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಬೆಳಗಾವಿ ಜಿಲ್ಲೆಯ ಆರ್.ಸಿ.ಎಚ್. ಅಧಿಕಾರಿ ಕಚೇರಿಯ ಸಾಹಾಯಕ ಸಾಂಖ್ಯಿಕ ಅಧಿಕಾರಿ ಮಹೇಶ ಹಿರೇಮಠ ವಿರುದ್ಧ ವಿಚಾರಣೆ ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಮಹೇಶ್ ಹಿರೇಮಠ ಕಚೇರಿಯಲ್ಲಿ ಮದ್ಯಪಾನದೊಂದಿಗೆ ಮೋಜು ಮಸ್ತಿ ಮಾಡಿ ಸೇವಾ ನಿಯಮ ಉಲ್ಲಂಸಿದ್ದಾರೆ. ಆದ್ದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖೆಯ ಸಕ್ಷಮ ಪ್ರಾಧಿಕಾರದ ಘಟನೋತ್ತರ ಅನುಮತಿ ಪಡೆಯುವ ವಿಷಯ ಹಾಗೂ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅವರು ಕಚೇರಿಯ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಆದೇಶದಲ್ಲಿ ತಿಳಿಸಿದ್ದಾರೆ.