ಹಿರಿಯರಿಗೆ ಆರೋಗ್ಯ ರಕ್ಷೆ; ವಿಸ್ತರಣೆಗೊಂಡ ಆಯುಷ್ಮಾನ್ ಭಾರತ್

Ayushman Bharath
Published on

ನವದೆಹಲಿ: ದೇಶದ 70 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ್​ವಿಸ್ತರಿತ ಯೋಜನೆಗೆ ಪ್ರಧಾನಿ ನರೇಂದ್ರ ದೆಹಲಿಯಲ್ಲಿ ಮಂಗಳವಾರ ಚಾಲನೆ ನೀಡಿದರು. ಇದರ ಜತೆಯಲ್ಲೇ ಇತರ ಅಭಿವೃದ್ಧಿ ಕಾರ್ಯ ಸೇರಿ ಒಟ್ಟು 12,850 ರೂ. ಮೌಲ್ಯದ ಯೋಜನೆಗಳಿಗೂ ಹಸಿರು ನಿಶಾನೆ ತೋರಿದರು. ಔಷಧೀಯ ದೇವತೆ ‘ಧನ್ವಂತರಿ’ ಜಯಂತಿ ಹಾಗೂ 9ನೇ ಆಯುರ್ವೆದ ದಿನವಾದ ಮಂಗಳವಾರ ಹಿರಿಯ ನಾಗರಿಕರ ಆರೋಗ್ಯಕ್ಕೆ ಸಂಬಂಧಿಸಿದ ಈ ಮಹತ್ವದ ಯೋಜನೆಗೆ ಚಾಲನೆ ನೀಡಿದರು. ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ’ ಆದಾಯ ಮಿತಿ ಇಲ್ಲದೆ 70 ವರ್ಷ ಮೇಲ್ಪಟ್ಟ ಪ್ರತಿ ಹಿರಿಯರಿಗೂ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನೀಡುವ ಯೋಜನೆ ಆಗಿದೆ. ಸೆಪ್ಟೆಂಬರ್​ನಲ್ಲಿ ಕೇಂದ್ರ ಸಚಿವ ಸಂಪುಟ ಯೋಜನೆಗೆ ಅನುಮೋದನೆ ನೀಡಿತ್ತು.

ನೋಂದಣಿ ಹೇಗೆ?: ಎರಡು ಹಂತದಲ್ಲಿ ನೋಂದಣಿಗೆ ಅವಕಾಶವಿದೆ. ಟಞ್ಜಚಢ.ಜಟಡ.ಜ್ಞಿ ವೆಬ್​ಸೈಟ್ ಪ್ರವೇಶಿಸಿ ಬಳಿಕ ಆ ಪುಟದ ಬಲಭಾಗದಲ್ಲಿರುವ ಅಞ ಐ ಉಜಿಜಜಿಚ್ಝಿಛಿ ಎಂದು ಕೊಡಲಾಗಿರುವ ಟ್ಯಾಬ್ ಕ್ಲಿಕ್ಕಿಸಬೇಕು. ಬಳಿಕ ಅಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಏನೆಲ್ಲ ಸೌಲಭ್ಯ ಇದೆ?

  • ವೈದ್ಯಕೀಯ ತಪಾಸಣೆ, ಸಮಾಲೋಚನೆ, ಚಿಕಿತ್ಸೆ
  • ಆಸ್ಪತ್ರೆ ದಾಖಲಾಗುವ ಪೂರ್ವ ಔಷಧ, ಸಪ್ಲಿಮೆಂಟ್ಸ್
  • ತೀವ್ರವಲ್ಲದ ಹಾಗೂ ತೀವ್ರ ನಿಗಾ ಘಟಕ ಸೌಲಭ್ಯ
  • ಡಯಾಗ್ನಸ್ಟಿಕ್ ಹಾಗೂ ಪ್ರಯೋಗಾಲಯ ತಪಾಸಣೆ
  • ಆಸ್ಪತ್ರೆಗೆ ದಾಖಲಾತಿ, ಆಹಾರ ಸೌಲಭ್ಯಗಳು
  • ಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ 15 ದಿನ ಆರೈಕೆ

ಕರ್ನಾಟಕ ಯೋಜನೆ

  • ರಾಜ್ಯದ 2 ಸೇರಿ ಹಲವು ಯೋಜನೆಗಳಿಗೆ ನಮೋ ಚಾಲನೆ
  • ನರಸಾಪುರ, ಬೊಮ್ಮಸಂದ್ರದ ಇಎಸ್​ಐ ಆಸ್ಪತ್ರೆಗೆ ಶಿಲಾನ್ಯಾಸ
  • 11 ತೃತೀಯ ಆರೋಗ್ಯ ಕಾಳಜಿ ಸಂಸ್ಥೆಗಳಲ್ಲಿ ಡ್ರೋನ್ ಸೇವೆ
  • ಈ 11 ಏಮ್ಸ್​ಗಳಲ್ಲಿ ತುರ್ತು ಸೇವೆಗೆ ಹೆಲಿಕಾಪ್ಟರ್ ಕೊಡುಗೆ
  • ಕೊ-ವಿನ್ ಮಾದರಿಯಲ್ಲಿ ಯು-ವಿನ್ ಪೋರ್ಟಲ್ ಲೋಕಾರ್ಪಣೆ

ಎಷ್ಟು ಜನರಿಗೆ ಲಾಭ?: ದೇಶದ 4.5 ಕೋಟಿ ಕುಟುಂಬಗಳ 6 ಕೋಟಿ ಹಿರಿಯ ನಾಗರಿಕರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

ಯೋಜನೆಯಲ್ಲಿದ್ದರೆ?: ಯೋಜನೆಗೆ ಈಗಾಗಲೇ ನೋಂದಾಯಿಸಿರುವ ಹಿರಿಯರಿಗೆ ಈ ನೂತನ ವಿಮಾ ಯೋಜನೆ ಮೂಲಕ ಹೆಚ್ಚುವರಿ ಅನುದಾನ ಸಿಗಲಿದೆ. ಅಂದರೆ ಪ್ರತಿ ವರ್ಷ 5 ಲಕ್ಷ ರೂ.ವರೆಗೆ ಪ್ರತ್ಯೇಕ ಆರೋಗ್ಯ ವಿಮೆ ಸಿಗಲಿದೆ.

ಆಯ್ಕೆಗೆ ಅವಕಾಶ: 70 ವರ್ಷದ ದಾಟಿದವರು ಈಗಾಗಲೇ ಸರ್ಕಾರದ ಇತರೆ ಯೋಜನೆಗಳ ಮೂಲಕ ಆರೋಗ್ಯ ವಿಮೆ ಪಡೆದಿದ್ದರೆ ಅಂಥವರು ಆ ಯೋಜನೆ ಅಥವಾ ಈ ಯೋಜನೆ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಖಾಸಗಿ ವಿಮೆ ಇದ್ದರೆ?: ಹಿರಿಯ ನಾಗರಿಕರು ಖಾಸಗಿ ಕಂಪನಿಗಳ ಆರೋಗ್ಯ ವಿಮೆ ಅಥವಾ ಸರ್ಕಾರಿ ನೌಕರರಿಗೆ ನೀಡುವ ವಿಮಾ ಯೋಜನೆ ಹೊಂದಿದ್ದರೆ ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಪ್ರಯೋಜನ ಪಡೆಯಲು ಅರ್ಹರು.

ಜನರು ಚಿಕಿತ್ಸೆಗಾಗಿ ಮನೆ, ಜಮೀನು, ಚಿನ್ನಾಭರಣ ಮಾರಿಕೊಳ್ಳಬೇಕಾದ ಕಾಲವಿತ್ತು. ಗಂಭೀರ ಕಾಯಿಲೆಗಳ ಚಿಕಿತ್ಸಾ ವೆಚ್ಚ ಕೇಳಿಯೇ ಬಡವರ ಆತ್ಮ ನಲುಗುತ್ತಿತ್ತು. ಬಡ ಸಹೋದರ- ಸಹೋದರಿಯರ ಈ ಅಸಹಾಯಕತೆ ನೋಡಲಾಗದೆ ಆಯುಷ್ಮಾನ್ ಭಾರತ್ ಯೋಜನೆ ಆರಂಭಿಸಲಾಯಿತು. ಆದರೆ ಪಶ್ಚಿಮ ಬಂಗಾಳ ಮತ್ತು ದೆಹಲಿ ಸರ್ಕಾರಗಳ ಅಸಹಕಾರದಿಂದ ಹಿರಿಯರಿಗೆ ಈ ಸೇವೆ ಒದಗಿಸಲಾಗದ್ದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ.

| ನರೇಂದ್ರ ಮೋದಿ ಪ್ರಧಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net