ರಿಟೇನ್​ಗೆ ದಿನಗಣನೆ ಬೆನ್ನಲ್ಲೇ ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದ RCB ಆಟಗಾರ

RCB 1
Published on

ಬೆಂಗಳೂರು: 18ನೇ ಆವೃತ್ತಿತಯ ಐಪಿಎಲ್​ (IPL) ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ರಿಟೇನ್​ (Retain) ವಿಚಾರಕ್ಕೆ ಸಂಬಂಧಿಸಿದಂತೆ ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಅಕ್ಟೋಬರ್​ 31ರಂದು ತಂಡಗಳು ರಿಟೇನ್​ ಪಟ್ಟಿಯನ್ನು (Retain List) ಬಿಡುಗಡೆ ಮಾಡಲಿದ್ದು, ಎಲ್ಲರ ಚಿತ್ತ ಅದರತ್ತ ಬಿದ್ದಿದೆ. ರಿಟೇನ್​ (Retain) ಸುದ್ದಿ ಹೊರಬೀಳುತ್ತಿದ್ದಂತೆ ಆಟಗಾರರು ತಾವು ಪ್ರತಿನಿಧಿಸುವ ತಂಡಗಳ ಪರ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಐಪಿಎಲ್​ನಲ್ಲಿ ತಾವು ಪ್ರತಿನಿಧಿಸುವ ತಂಡಗಳಿಗೆ ಸಂದೇಶವನ್ನು ರವಾನಿಸುತ್ತಿದ್ದಾರೆ. ಇದೀಗ ಆರ್​ಸಿಬಿ (RCB)  ತಂಡದ ಆಟಗಾರ ಕೂಡ ಇದೇ ಕೆಲಸ ಮಾಡಿದ್ದು, ದೇಶೀಯ ಕ್ರಿಕೆಟ್​ನಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾರೆ.

ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಧ್ಯಪ್ರದೇಶ ಹಾಗೂ ಹರಿಯಾಣ ನಡುವಿನ ರಣಜಿ ಪಂದ್ಯದಲ್ಲಿ ರಜತ್​ ಪಾಟಿದಾರ್​ 68 ಎಸೆತಗಳಲ್ಲಿ  ಸ್ಫೋಟಕ ಶತಕ ಸಿಡಿಸಿದ್ದು, ದೇಶೀಯ ಕ್ರಿಕೆಟ್​ನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದಾರೆ. ಈ ಮೂಲಕ ರಣಜಿ ಟೂರ್ನಿಯಲ್ಲಿ (Rajat Patidar) ಅತೀ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಮಧ್ಯಪ್ರದೇಶದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್​ (Rajat Patidar) ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಹೆಚ್ಚಿನ ಒತ್ತು ನೀಡಿದರು. 6 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್​ಗಳೊಂದಿಗೆ ವೇಗದ ಶತಕ ಸಿಡಿಸಿದರು. ಇದಕ್ಕೂ ಮೊದಲು 2016 ರಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಪಂತ್ (Rishabh Pant) ಜಾರ್ಖಂಡ್ ವಿರುದ್ಧ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 2023 ರಲ್ಲಿ ಛತ್ತೀಸ್​ಗಢದ ವಿರುದ್ಧ ರಿಯಾನ್ ಪರಾಗ್ (Riyan Parag) 56 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಮೊದಲೆರಡು ವೇಗದ ಶತಕಗಳಾಗಿವೆ.

15, 16, 17ನೇ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ (RCB) ಪರ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ್ದ ರಜತ್​ ಪಾಟೀದಾರ್​ ತಂಡದ ಪಾಲಿನ ಆಪತ್ಭಾಂದವ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುತ್ತಿದ್ದರು. 18ನೇ ಆವೃತ್ತಿಗೆ ಸಂಬಂಧಿಸಿದಂತೆ ಒಂದು ತಂಡಕ್ಕೆ ಆರು ಆಟಗಾರರನ್ನು ರಿಟೇನ್​ ಮಾಡಲು ಐಪಿಎಲ್​ ಫ್ರಾಂಚೈಸಿ ಅವಕಾಶ ನೀಡಿದ್ದು, ಶತಕ ಸಿಡಿಸುವ ಮೂಲಕ ರಜತ್​ ಪಾಟೀದಾರ್ ಆರ್​ಸಿಬಿ (RCB)​ ರಿಟೇನ್​ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಇಲ್ಲವಾ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net