BJP MLA ಇರುವ ಜಯನಗರಕ್ಕೆ ಅನುದಾನ ಬಿಡುಗಡೆ ಮಾಡದಂತೆ DCM DK Shivakumar ಸೂಚನೆ; ನೀಡಿದ ಕಾರಣ ಹೀಗಿದೆ

DK Shivakumar
Published on

ಬೆಂಗಳೂರು: ಜಯನಗರ (Jayanagar) ಹೊರತುಪಡಿಸಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬರುವ 27  ವಿಧಾನಸಭಾ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ತಲಾ 10 ಕೋಟಿ ರೂ. ಮಂಜೂರು ಮಾಡುವಂತೆ ಬಿಬಿಎಂಪಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ​​ ಸೂಚಿಸಿದ್ದು, ಈ ನಡೆ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಉಪಮುಖ್ಯಮಂತ್ರಿಗಳ ಈ ನಡೆ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಬಗ್ಗೆ ಜಯನಗರ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ (CK Ramamurthy) ಟ್ವೀಟ್​ ಮಾಡಿ ಕಿಡಿಕಾರಿದ್ದು, ಈ ಬಗ್ಗೆ ಸ್ವತಃ ಉಪಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿದ್ದಾರೆ.

ಬೊಕ್ಕಸಕ್ಕೆ ಕೋಟ್ಯಂತರ ರೂ ಹಣ. ಪಾವತಿಸುತ್ತಿರುವ ಜಯನಗರ ಕ್ಷೇತ್ರ ಏನು ಅನ್ಯಾಯ ಮಾಡಿದೆಯೋ ಗೊತ್ತಿಲ್ಲ. ರಾಜಕೀಯ ದ್ವೇಷಕ್ಕಾಗಿ ಜನರಿಗೆ ಡಿಸಿಎಂ ಅವಮಾನ ಮಾಡಬಾರದು. ಈ ನಡೆಯ ವಿರುದ್ದ ಕ್ಷೇತ್ರದ ಜನರೊಂದಿಗೆ ಸೇರಿ 'ನಮ್ಮ ತೆರಿಗೆ- ನಮ್ಮ ಹಕ್ಕು' ಹೋರಾಟಕ್ಕೆ ತಯಾರಿ ನಡೆಸಲಾಗಿದೆ ಎಂದು ಸಿಕೆ ರಾಮಮೂರ್ತಿ (CK Ramamurthy) ಟ್ವೀಟ್​ ಮಾಡಿದ್ದಾರೆ. ಶಾಸಕರ ಈ ಮಾತಿಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್​ (DCM DK Shivakumar) ನಾನೇ ಅನುದಾನ ಕೊಟ್ಟಿಲ್ಲ ಎಂದು ಹೇಳಿ ಕಾರಣವನ್ನೂ ವಿವರಿಸಿದ್ದಾರೆ. 

ನಗರದಲ್ಲಿ ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar), ನಾನೇ ಅನುದಾನ ಕೊಟ್ಟಿಲ್ಲ. ಅವರು ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರು. ಅವರು ನೀಡಿರುವ ಹೇಳಿಕೆಯನ್ನು ಸಾಬೀತು ಮಾಡಬೇಕಾಗಿರುವ ಕಾರಣ ನಾವು ಅದನ್ನು ತನಿಖೆ ಮಾಡಿಸುತ್ತಿದ್ದೇವೆ. ನಾವೇನು ತಪ್ಪು ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ (DK Shivakumar) ಪ್ರಶ್ನಿಸಿದ್ದಾರೆ.

ವಿಪಕ್ಷ ನಾಯಕ ಆರ್​. ಅಶೋಕ್​ ಮಾತನಾಡಿ, 16 ಮತದಿಂದ ರಾಮಮೂರ್ತಿ (CK Ramamurthy) ಗೆದ್ದಿದ್ದಕ್ಕೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ನಾವು ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್​ಗೆ 80 ಕೋಟಿ ರೂಪಾಯಿ ಕೊಟ್ಟಿದ್ದೆವು. ಅನುದಾನ ಸಂಬಂಧ ನಾನು ಡಿಸಿಎಂ ಡಿಕೆ ಶಿವಕುಮಾರ್​​ಗೆ (DK Shivakumar) ಪತ್ರ ಬರೆಯುತ್ತೇನೆ. ದ್ವೇಷದ ರಾಜಕಾರಣ ‌ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net