ಕಸ ಗುಡಿಸಲು ಬಾಲಕಿಯರನ್ನು ಕರೆದು ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನಿಗೆ ಬಿತ್ತು ಗೂಸಾ!

RAPIST
Published on

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಖಾಸಗಿ ಶಾಲೆಯ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ಶಾಲೆಯ ಮುಖ್ಯ ಶಿಕ್ಷಕ ನರೇಂದ್ರ ವಿದ್ಯಾರ್ಥಿನಿಯರನ್ನು ಆಫೀಸ್ ರೂಂಗೆ ಕಸ ಗುಡಿಸುವುದಕ್ಕೆ ಅಂತ ಪದೇ ಪದೇ ಕರೆಯುತ್ತಿದ್ದ. ಆಫೀಸ್ ರೂಂಗೆ ಬಂದಾಗ ವಿದ್ಯಾರ್ಥಿನಿಯರ ಜೊತೆ ಈತ ಕೆಟ್ಟದಾಗಿ ವರ್ತಿಸುತ್ತಿದ್ದ. ವಿದ್ಯಾರ್ಥಿನಿಯರು ಸಹಪಾಠಿಗಳ ಬಳಿ ಹೇಳಿಕೊಂಡಾಗ ವಿಷಯ ಬಹಿರಂಗವಾಗಿದೆ.

ವಿದ್ಯಾರ್ಥಿನಿಯರ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಖ್ಯ ಶಿಕ್ಷಕನಿಗೆ ಪೊಲೀಸ್ ಠಾಣೆಗೆ ಬರುವಂತೆ ಹೇಳಿದಾಗಲೂ ಬರದಿದ್ದಾಗ ಪೋಷಕರು ಸೇರಿಕೊಂಡು ಧರ್ಮದೇಟು ನೀಡಿದ್ದಾರೆ. ಕೊನೆಗೆ ಬೇಲೂರು ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಎಳೆದೊಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net