

ಬೆಂಗಳೂರು: ನಿನ್ನೆಯಷ್ಟೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದು ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಈಗ ಈ ಕಾರ್ಯಕ್ರಮದ ವಿಷಯವಾಗಿ ರಾಜ್ಯದಲ್ಲಿ ವಿವಾದದ ಅಲೆಗಳೇ ಏಳುತ್ತಿವೆ. ಮಾಜಿ ಪ್ರಧಾನಿ ದೇವೇಗೌಡರನ್ನು ಕಾರ್ಯಕ್ರಮಕ್ಕೆ ಹಿಂದಿನ ದಿನ ಆಹ್ವಾನಿಸಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಬಗ್ಗೆ ಸಚಿವ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದು ದೇವೇಗೌಡರನ್ನು ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದಿದ್ದಾರೆ.
'ನಾನು ಅಕ್ಟೋಬರ್ನಲ್ಲಿ ದೇವೇಗೌಡರನ್ನು ಭೇಟಿಯಾಗಿ ಮೃತ್ತಿಕೆ ಸಂಗ್ರಹಕ್ಕೆ ಆಹ್ವಾನ ನೀಡಿದ್ದೆ. ಅದೇ ವೇಳೆ ಪ್ರತಿಮೆ ಅನಾವರಣಕ್ಕೂ ಆಹ್ವಾನಿಸಿದ್ದೆ. ಆದರೆ ಅದು ಅನೌಪಚಾರಿಕ ಆಹ್ವಾನ. ಅದಾದ ಬಳಿಕ ಪ್ರಧಾನಮಂತ್ರಿ ಬಂದು ಪ್ರತಿಮೆ ಅನಾವರಣ ಮಾಡುವುದು ಎಂದು ನಿಗದಿಯಾಗಿತ್ತು. ಪ್ರಧಾನಮಂತ್ರಿ ಬರುವ ಕಾರ್ಯಕ್ರಮ ಆದ್ದರಿಂದ ಗಣ್ಯರನ್ನು ಮುಖ್ಯಮಂತ್ರಿಯೇ ಕರೆಯುತ್ತಾರೆ. ಆದರೆ ಸಿಎಂ, ಕಾರ್ಯಕ್ರಮದ ಒತ್ತಡದಿಂದಾಗಿ ಹಿಂದಿನ ದಿನ ದೂರವಾಣಿ ಕರೆ ಮಾಡಿ ಆಹ್ವಾನ ನೀಡಿದ್ದಾರೆ' ಎಂದು ಅಶ್ವಥ್ ನಾರಾಯಣ ಹೇಳಿದರು.
ವೆ