ನಮ್ಮಿಬ್ಬರದ್ದು ಸಖತ್ ಜೋಡಿ… ಸ್ಟಾರ್​ ನಟನ ಬಗ್ಗೆ ನಟಿ ಕೀರ್ತಿ ಸುರೇಶ್​ ಬಿಚ್ಚುಮಾತು!

ವಿಜಯವಾಣಿ-2024-08-13T093117.514
Published on

ತಮಿಳುನಾಡು: ತನ್ನ ಕಿರುನಗೆಯಿಂದಲೇ ಎಲ್ಲರನ್ನು ಸೆಳೆಯುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್​, ವಿಭಿನ್ನ ಹಾಗೂ ಅದ್ಭುತ ಪಾತ್ರಗಳಿಂದಲೇ ಇಂದು ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ. ತಮಿಳು-ತೆಲುಗು ಚಿತ್ರರಂಗದ ಸ್ಟಾರ್​ ನಟರೊಂದಿಗೆ ನಟಿಸಿರುವ ಕೀರ್ತಿ, ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್​ ಸ್ಟಾರ್​, ನಟ ಪ್ರಭಾಸ್​ ಅಭಿನಯದ ಬ್ಲಾಕ್​ಬಸ್ಟರ್​ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಬುಜ್ಜಿ ಕಾರಿಗೆ ಧ್ವನಿ ನೀಡುವ ಮೂಲಕ ಪರೋಕ್ಷವಾಗಿ ಚಿತ್ರದ ಭಾಗವಾಗಿದ್ದಾರೆ. ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ 'ಮಹಾನಟಿ', ಬೆಳ್ಳಿ ಪರದೆಯ ಮೇಲೆ ತಾನು ಯಾರೊಂದಿಗೆ ಅಭಿನಯಿಸಿದರೆ ಬೆಸ್ಟ್​ ಜೋಡಿ ಎಂಬುದರ ಬಗ್ಗೆ ಇದೀಗ ಮುಕ್ತವಾಗಿ ಮಾತನಾಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ್ದ ಕೀರ್ತಿ ಸುರೇಶ್​ , ತಮ್ಮ ಹಾಟ್​ ಲುಕ್​ನಿಂದ ಹೊಸ ಹವಾ ಸೃಷ್ಟಿಸಿದ್ದರು. ಈ ವರ್ಷದ 69ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ ಅವರು ತಮ್ಮ ಗ್ಲಾಮರಸ್​ ಲುಕ್​ನಿಂದಲೇ ನೋಡುಗರ ನೋಟ ಕಸಿದರು. ಹಿಂದೆಂದೂ ಇಷ್ಟೊಂದು ಚೆಂದದ ಲುಕ್​ನಲ್ಲಿ ಕಾಣಿಸಿಕೊಳ್ಳದ ಕೀರ್ತಿ ಇದೇ ಪ್ರಥಮ ಬಾರಿಗೆ ಈ ರೀತಿ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾಗಿದ್ದು. ಡೆಸ್ ಕೋಡ್​ನಿಂದ ಸಖತ್ ಸದ್ದು ಮಾಡಿದ್ದ 'ಮಹಾನಟಿ' ಇದೀಗ ತಮ್ಮ ಹೇಳಿಕೆಯಿಂದಲೂ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ.

ನಾನು ಸಿಂಗಲ್ ಆಗಿ ಇಲ್ಲವೇ ಇಲ್ಲ ಎಂದು ಶಾಕಿಂಗ್ ಹೇಳಿಕೆ ಕೊಡುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಕೀರ್ತಿ, ಹುಡುಗ ಯಾರು ಎಂಬುದರ ಬಗ್ಗೆ ಮಾತ್ರ  ತುಟಿ ಬಿಚ್ಚಲಿಲ್ಲ. ಈ ಹೇಳಿಕೆಯ ಬೆನ್ನಲ್ಲೇ ಮತ್ತೊಂದು ಸಂಗತಿ ಹಂಚಿಕೊಂಡಿದ್ದು, ಆನ್​ಸ್ಕ್ರೀನ್​ನಲ್ಲಿ ನನಗೆ ಬೆಸ್ಟ್​ ಜೋಡಿ ಎಂದರೆ ಅದು ಜೂ. ಎನ್​ಟಿಆರ್ ಎಂದಿದ್ದಾರೆ. "ಅವರ ನಟನೆ ನನಗೆ ಬಹಳ ಇಷ್ಟ. ನಾವಿಬ್ಬರು ತೆರೆ ಮೇಲೆ ಉತ್ತಮ ಜೋಡಿಯಾಗಿ ಕಾಣಿಸುತ್ತೇವೆ ಎಂಬುದು ನನ್ನ ಅನಿಸಿಕೆ. ಶೀಘ್ರವೇ ನಿರ್ದೇಶಕರು ನನ್ನಾಸೆಯನ್ನು ಈಡೇರಿಸುತ್ತಾರೆ ಎಂದು ಕಾದು ನೋಡೋಣ" ಎಂದು ನಗುತ್ತಲೇ ಹೇಳಿದ್ದಾರೆ. ಮಹೇಶ್​ ಬಾಬು ಮತ್ತು ಪವನ್​ ಕಲ್ಯಾಣ್​ ಜತೆ ನಟಿಸಿರುವ ಕೀರ್ತಿ ಇಲ್ಲಿಯವರೆಗೆ ಜೂ.ಎನ್​ಟಿಆರ್​ ಜತೆ ತೆರೆ ಹಂಚಿಕೊಂಡಿಲ್ಲ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net