ಕೈಗಾರಿಕೆಗಳ ಉಳಿವಿಗೆ ಬದ್ಧ

05 BIRUR 02 hdk
ಆರ್‌ಎಂಎಸ್ ಸ್ಥಳಾಂತರ ಕೈ ಬಿಡುವಂತೆ ಒತ್ತಾಯಿಸಿ ಬೀರೂರಿನಲ್ಲಿ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪುರಸಭಾಧ್ಯಕ್ಷೆ ವನಿತಾ ಮಧು ಮನವಿ ಸಲ್ಲಿಸಿದರು. ಬಿ.ಆರ್.ಮೋಹನಕುಮಾರ್, ಸವಿತಾ ರಮೇಶ್, ಬಿ.ಪಿ.ನಾಗರಾಜ್ ಇದ್ದರು.
Published on

ಬೀರೂರು: ಹಲವು ದಶಕಗಳಿಂದ ಬೀರೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್‌ಎಂಎಸ್ ಸ್ಥಳಾಂತರಗೊಳ್ಳುವ ಸನ್ನಿವೇಶವಿದ್ದು ಅದನ್ನು ಇಲ್ಲಿಯೆ ಉಳಿಸಿಕೊಡಬೇಕು ಎಂದು ಪುರಸಭಾಧ್ಯಕ್ಷೆ ವನಿತಾ ಮಧು ನಾಗರಿಕರ ಪರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಗುರುವಾರ ವಾಪಸಾಗುವಾಗ ಬೀರೂರು ಪುರಸಭೆ ಮುಂಭಾಗ ಅಧ್ಯಕ್ಷರು ಮತ್ತು ನಾಗರಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಸಚಿವ, ನಾಡಿನ ಭವಿಷ್ಯ ಬೆಳಗಿದ ಸರ್. ಎಂ.ವಿಶ್ವೇಶ್ವರಯ್ಯ ಸ್ಥಾಪಿಸಿದ ಭದ್ರಾವತಿಯ ವಿಐಎಸ್‌ಎಲ್ ಉಳಿಸಲು ಶ್ರಮಿಸುತ್ತೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಅಸಹಕಾರ ಮನೋಭಾವದ ನಡುವೆ ಪ್ರವಾಹದ ವಿರುದ್ಧ ಈಜಬೇಕಾದ ಸನ್ನಿವೇಶದಲ್ಲಿಯೂ ನನ್ನ ಪ್ರಾಮಾಣಿಕ ಪ್ರಯತ್ನ ನಿಲ್ಲುವುದಿಲ್ಲ. ಆರ್‌ಎಂಎಸ್ ಕಚೇರಿ ಉಳಿವಿಗೆ ಸಂಬಂಧಿಸಿದಂತೆ ಸಂಬಂಧ ಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿ ಆಶ್ವಾಸನೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸದಸ್ಯ ಬಿ.ಆರ್.ಮೋಹನಕುಮಾರ್, ಎಸ್.ಎನ್.ರಾಜು, ರವಿಕುಮಾರ್, ಜೆಡಿಎಸ್ ಕಾರ್ಯಕರ್ತರಾದ ಬಿ.ಪಿ.ನಾಗರಾಜ್, ವಸಂತಾ ರಮೇಶ್, ರೈಲ್ವೆ ಬಳಕೆದಾರರ ವೇದಿಕೆಯ ವಿನಯಕುಮಾರ್, ಡಿಶ್ ದೇವರಾಜ್, ಅಡಕೆ ಬೆಳೆಗಾರ ಕೆ.ಜಿ.ಮಂಜುನಾಥ, ಪ್ರಮುಖರಾದ ಸವಿತಾ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net