ಎಚ್​.ಡಿ.ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರೊಬ್ಬ ರೈತನ ಮಗ: ಪ್ರತಾಪ್​ ಸಿಂಹ

hdk pratap simha
Published on

ಮೈಸೂರು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಆಡಳಿತವನ್ನು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಪ್ರಶಂಸಿಸಿದ್ದು, ಅವರೊಬ್ಬ ರೈತನ ಮಗ ಎಂದಿದ್ದಾರೆ.

ಕುಮಾರಸ್ವಾಮಿ 20-20 ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ರೈತರ ಸಾಲ ಮನ್ನಾದಂತಹ ರೈತಪರ ಕಾರ್ಯಕ್ರಮ ನೀಡಿದ್ದಾರೆ. ಕುಮಾರಸ್ವಾಮಿ ಒಬ್ಬ ರೈತನ ಮಗ ಎಂದು ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸುವ ಕಠಿಣ ನಿಯಮವನ್ನೊಳಗೊಂಡ ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ಜೆಡಿಎಸ್​ ಬೆಂಬಲ ಕುರಿತು ಜೆಡಿಎಸ್​ ನಿಲುವಿನ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಎಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದರ ಬೆನ್ನಲ್ಲೇ ಎಚ್​ಡಿಕೆ ಪರ ಬ್ಯಾಟಿಂಗ್​ ಮಾಡಿದ ಪ್ರತಾಪ್​ ಸಿಂಹ, ಬಿಜೆಪಿ ಸರ್ಕಾರ ಕೈಗೊಂಡ ಒಳ್ಳೆಯ ಕೆಲಸವನ್ನು ಕುಮಾರಸ್ವಾಮಿ ಬೆಂಬಲಿಸಿದ್ದಾರೆ. ಅವರನ್ನು ರಾಜಕೀಯ ಕಾರಣಕ್ಕೆ ಟೀಕಿಸುವುದು ಸಣ್ಣತನ. ರೈತರು ಹಾಗೂ ಗೋವಿನ ಬಗ್ಗೆ ಎಚ್​ಡಿಕೆಗೆ ಗೊತ್ತಿದೆ. ಹೀಗಾಗಿ ಅವರು ಕಾಯ್ದೆಯನ್ನು ಬೆಂಬಲಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net